
ಬಳ್ಳಾರಿ / ಕಂಪ್ಲಿ : ಕಂಪ್ಲಿ ಸಮೀಪದ ಹೊಸ ನೆಲ್ಲೂಡಿ ಗ್ರಾಮದಲ್ಲಿ ದವನದ ಹುಣ್ಣಿಮೆ ಪ್ರಯುಕ್ತ ಶ್ರೀ ಛತ್ರ ವೀರಾಂಜನೇಯ ಸ್ವಾಮಿಯ ಉಚ್ಚಯ್ಯ ರಥೋತ್ಸವವು ಶನಿವಾರ ಸಂಜೆ ಜರುಗಿತು.

ಈ ಸಂದರ್ಭದಲ್ಲಿ ಛತ್ರ ವೀರಾಂಜನೇಯ ಸ್ವಾಮಿಯ ಪುರೋಹಿತರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ದವನದ ಹುಣ್ಣಿಮೆ ಪ್ರಯುಕ್ತ ಶ್ರೀ ಛತ್ರ ವೀರಾಂಜನೇಯ ಸ್ವಾಮಿಯ ರಥೋತ್ಸವವು ಸಕಲ ಸದ್ಬಕ್ತರಿಂದ ಸೇರಿ ಸಂಭ್ರಮದಿಂದ ಆಚರಿಸಲಾಯಿತು, ಬೆಳಿಗ್ಗೆ ಛತ್ರ ವೀರಾಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಅಭಿಷೇಕ ಹಾಗೂ ಸಕಲ ಪೂಜೆಗಳೊಂದಿಗೆ ಸ್ವಾಮಿಯನ್ನು ಅದ್ಭುತವಾಗಿ ಹೂವು, ಹಣ್ಣು-ಹಂಪಲುಗಳಿಂದ ಸುಂದರವಾಗಿ ಅಲಂಕರಿಸಲಾಯಿತು.
ಸಂಜೆ ರಥೋತ್ಸವ ಕಾರ್ಯಕ್ರಮದ ಅಂಗವಾಗಿ ಊರಿನ ಹಿರಿಯರು ಮತ್ತು ಯುವಕರ ಕೋಲಾಟ ಪ್ರದರ್ಶನ ಗಮನಾರ್ಹವಾಗಿತ್ತು. ಊರಿನ ಸರ್ವ ಸದ್ಬಕ್ತರು ಸೇರಿ ಸಡಗರ ಸಂಭ್ರಮದೊಂದಿಗೆ ವಿಜೃಂಭಣೆಯಿಂದ ಈ ರಥೋತ್ಸವ ನೆರವೇರಿಸಿದ ನಂತರ ಊರಿನ ಹಾಗೂ ಸುತ್ತ-ಮುತ್ತಲ ಗ್ರಾಮಗಳಿಂದ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಸ್ವಾಮಿಯ ಪ್ರಸಾದವನ್ನು ನೀಡಲಾಯಿತು ಎಂದರು.
ಈ ಸಂದರ್ಭದಲ್ಲಿ ಹೊಸ ನೆಲ್ಲುಡಿ, ಕೊಟ್ಟಾಲ್, ಶಾಂತಿ ನಗರ, ಶಂಕರ ಸಿಂಗ್ ಕ್ಯಾಂಪ್, ಸೇರಿದಂತೆ ಊರಿನ ಮುಖಂಡರು, ಹಿರಿಯರು, ಕಿರಿಯರು, ಯುವಕರು, ಉಪಸ್ಥಿತರಿದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
