
ಬಾಗಲಕೋಟೆ : ಭಾರತಾಂಬೆಯ ಸೇವೆಯನ್ನು ಗಡಿಯನ್ನು ಕಾಯುವುದರ ಮೂಲಕ ಮಾಡಿರುವ ಮತ್ತು ಮಾಡುತ್ತಿರುವ ಸೈನಿಕರು ಭಾರತಾಂಬೆಯ ಹೆಮ್ಮೆಯ ನಿಜವಾದ ಸುಪುತ್ರರು ಎಂದು ವಿಧಾನ ಪರಿಷತ್ ಸದಸ್ಯರಾದ ಶ್ರೀ ಪಿಎಚ್ ಪೂಜಾರ್ ಹೇಳಿದರು ಅವರು, ಜಿಲ್ಲೆಯ ಬಾಗಲಕೋಟೆ ತಾಲೂಕಿನ ಶಿರೂರು ಪಟ್ಟಣದ ಶ್ರೀ ಸಿದ್ದೇಶ್ವರ ಪ್ರೌಢಶಾಲಾ ಮೈದಾನದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಗೆಳೆಯರ ಬಳಗದವರು ಹಮ್ಮಿಕೊಂಡ ಶಿರೂರು ಪ್ರೀಮಿಯರ್ ಲೀಗ್ ಸೀಸನ್ 2 ಕ್ರಿಕೆಟ್ ಟೂರ್ನಮೆಂಟ್ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕ್ರೀಡೆಗಳು ಯುವಕರಿಗೆ ದೈಹಿಕ ಸದೃಢತೆಯನ್ನು ಕೊಡುವುದರ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಆ ನಿಟ್ಟಿನಲ್ಲಿ ಬರಿ ಕ್ರಿಕೆಟ್ ಆಟವನ್ನು ಆಯೋಜಿಸದೆ ದೇಶಕ್ಕಾಗಿ ತಮ್ಮ ಸೇವೆಯನ್ನು ಸಲ್ಲಿಸಿದ ಶಿರೂರಿನ ಸೈನಿಕರಿಗೆ ಶ್ರೀ ಸಿದ್ಧಲಿಂಗೇಶ್ವರ ಗೆಳೆಯರ ಬಳಗದವರು ಹಮ್ಮಿಕೊಂಡ ಸತ್ಕಾರ ಸಮಾರಂಭ ನಿಜಕ್ಕೂ ಹೃದಯಸ್ಪರ್ಶಿಯಾದ ಕಾರ್ಯಕ್ರಮ ಎಂದು ನುಡಿದು ಶಿರೂರು ಪಟ್ಟಣದ ಹೆಮ್ಮೆಯ ಸೈನಿಕರನ್ನು ಅಭಿನಂದಿಸಿ ಸತ್ಕರಿಸಿದರು
ಮುಖ್ಯ ಅತಿಥಿಗಳಾಗಿ ಜ್ಯೋತಿ ಬೆಳಗಿಸಿದ ಭಾರತೀಯ ಆಹಾರ ನಿಗಮದ ಸಲಹಾ ಸಮಿತಿಯ ಕರ್ನಾಟಕ ರಾಜ್ಯದ ನಿರ್ದೇಶಕರಾದ ಶ್ರೀ ಟಿ . ವಿ ಗಿರಿಜಾ ಅವರು ಮಾತನಾಡಿ ಶಿರೂರು ಯುವಕರಲ್ಲಿ ಕ್ರಿಕೆಟ ಕ್ರೀಡೆಯ ಬಗ್ಗೆ ಇರುವ ಅಭಿಮಾನ ಎಲ್ಲರಿಗೂ ಹೆಮ್ಮೆ ಕರ್ನಾಟಕ ರಾಜ್ಯದ ರಣಜಿ ತಂಡಕ್ಕೆ ಹಾಗೂ ರಾಷ್ಟ್ರಮಟ್ಟದ ತಂಡಗಳಲ್ಲಿ ಶಿರೂರಿನ ಕ್ರಿಕೆಟಿನ ಆಟಗಾರ ಪಾಲ್ಗೊಳ್ಳುವಂತಾಗಬೇಕು ಎಂದು ಶುಭ ಹಾರೈಸಿದರಲ್ಲದೆ ಅದಕ್ಕೆ ತಮ್ಮ ಪ್ರೋತ್ಸಾಹ ಸಹಾಯ ಸಹಕಾರ ಇದ್ದೇ ಇರುತ್ತದೆ ಎಂದು ನುಡಿದರು ವೇದಿಕೆ ಮೇಲೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶ್ರೀರಂಗಪ್ಪ ಮಳ್ಳಿ ಪ್ರಗತಿಪರ ಕೃಷಿಕ ಶ್ರೀ ಶಶಿಧರ್ ದ್ಯಾವಪ್ಪ ನಡುವಿನಮನಿ ಶ್ರೀ ಸುರೇಶ್ ಗೌಡ ಪಾಟೀಲ್ ಹಾಗೂ ಶಿರೂರು ಮಾಜಿ ಸೈನಿಕ ಸಂಘದ ಸರ್ವ ಯೋಧರು ಭಾಗವಹಿಸಿ ಸನ್ಮಾನ ಸ್ವೀಕರಿಸಿದರು
ಈ ಒಂದು ಟೂರ್ನಿಯಲ್ಲಿ ಎಷ್ಟು ವಿಕೆಟ್ಗಳನ್ನು ಪಡೆಯಲಾಗುತ್ತದೆಯೋ ಅಷ್ಟು ಸಸಿಗಳನ್ನು ಜೂನ್ 5ರ ವಿಶ್ವ ಪರಿಸರ ದಿನಾಚರಣೆಯಂದು ಶಿರೂರು ಪಟ್ಟಣದ ಗ್ರಾಮಸ್ಥರ ಗುರು ಹಿರಿಯರ ಸಹಕಾರದೊಂದಿಗೆ ಹಾಗೂ ಮಾಜಿ ಸೈನಿಕರ ಸಹಕಾರದೊಂದಿಗೆ ನೆಡುವುದಾಗಿ ಕಾರ್ಯಕ್ರಮ ಸಂಘಟನೆ ಮಾಡಿದ ಶ್ರೀ ಸಿದ್ದಲಿಂಗೇಶ್ವರ ಗೆಳೆಯರ ಬಳಗದ ರವಿ ಮೇಟಿ ತಿಳಿಸಿದರು ಕಾರ್ಯಕ್ರಮದಲ್ಲಿ ಸುರೇಶ್ ಗಾಣಿಗೇರ್ ಅನ್ವರ್ ಅಮರಗೋಳ ಮಂಜು ಆಡಿನ ಮಲ್ಲು ಕುರಹಟ್ಟಿ ಸತೀಶ್ ಅಂಬಿಗೇರ್ ಸಂಜಯ್ ನಡುವಿನಮನಿ ಬಾಬು ನಬಿವಾಲೆ ಉಪಸ್ಥಿತರಿದ್ದರು.
- ಕರುನಾಡ ಕಂದ
