ಯಾದಗಿರಿ/ ಗುರುಮಠಕಲ್: ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಹನುಮಾನ್ ಜಯಂತಿಯನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುವುದು.
ಪಟ್ಟಣದ ಹನುಮಾನ ದೇವಸ್ಥಾನ ಸಮಿತಿ ವತಿಯಿಂದ ಬೆಳಿಗ್ಗೆಯಿಂದಲೇ ಪೂಜೆ ಪುನಸ್ಕಾಗಳು ಜರುಗಿದವು ನಂತರ ಪ್ರಸಾದ ವಿತರಿಸಲಾಯಿತು.
ಸಂಜೆ ವೇಳೆ ಹಿಂದೂ ಯುವ ಘರ್ಜನೆ ಸಮಿತಿ ವತಿಯಿಂದ ಬೃಹತ್ ಶೋಭಾಯಾತ್ರೆ ಆಯೋಜಿಸಲಾಗಿತ್ತು, ಶೋಭಾಯಾತ್ರೆಯು ಅಂಬಿಗರ ಚೌಡಯ್ಯ ವೃತ್ತದಿಂದ ಪ್ರಾರಂಭವಾಗಿ ಡಿಜೆ ಮತ್ತು ಲೇಸರ್ ಲೈಟ್ ವಿನ್ಯಾಸದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಜನಮನ ಸೆಳೆಯಿತು.
ಕಾರ್ಯಕ್ರಮವನ್ನು ಸಾಮೂಹಿಕ ಹನುಮಾನ ಚಾಲೀಸ ಪಠಣದ ಮಾಡುವ ಮೂಲಕ ಚಾಲನೆ ನೀಡಿ ಭಕ್ತರು ಹನುಮಂತನ ದೈವಿಕ ಅನುಗ್ರಹವನ್ನು ಆಚರಿಸಲು ಮತ್ತು ಸಂತೋಷ, ಸಮೃದ್ಧಿ, ಶಕ್ತಿ, ಧೈರ್ಯ ಮತ್ತು ರಕ್ಷಣೆಗಾಗಿ ಒಕ್ಕೊರಲಿನಿಂದ ಆಶೀರ್ವಾದ ಬೇಡಿದರು.
ಶೋಭಾಯಾತ್ರೆಯು ಮುಖ್ಯರಸ್ತೆಯಿಂದ ಸಿಹಿನೀರಿನ ಬಾವಿ, ನಗರೇಶ್ವರ ದೇವಸ್ಥಾನ, ಅಂಚೆ ಕಚೇರಿ, ಮಲ್ಲಯ್ಯನ ಕಟ್ಟಿ, ಮೂಲಕ ಆಂಜನೇಯ ದೇವಸ್ಥಾನ ತಲುಪಿತು. ಕಾರ್ಯಕ್ರಮದಲ್ಲಿ ಯುವಕರು ಮತ್ತು ಮಕ್ಕಳು ಕುಣಿದು ಕುಪ್ಪಳಿಸಿದರು ಸಾಕಷ್ಟು ಸಂಖ್ಯೆಯಲ್ಲಿ ಜನ ಸ್ತೋಮ ಸೇರಿ ಕಾರ್ಯಕ್ರಮಕ್ಕೆ ಹೆಚ್ಚಿನ ಶೋಭೆ ತಂದುಕೊಟ್ಟರು.
ಈ ಸಂದರ್ಭದಲ್ಲಿ ಹನುಮಾನ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಹಿಂದೂ ಯುವ ಘರ್ಜನೆ ಸಮಿತಿ ಅಧ್ಯಕ್ಷ ವೆಂಕಟೇಶ್ ಮುದಿರಾಜ್, ಕಾಶಪ್ಪ ಮನ್ನೇ, ಸಾಬಣ್ಣ ಮನ್ನೇ, ರಮೇಶ್ ಹುಗಾರ , ಹಣಮಂತು,ನರಸಪ್ಪ ಗಂಗಾನೊಳ, ಬನ್ನಪ್ಪ,ರಮೇಶ್ ಮನ್ನೇ, ಶ್ರೀನಿವಾಸ ಯಾದವ್, ಹಿಂದೂ ಯುವ ಘರ್ಜನೆ ಸಮಿತಿ ಎಲ್ಲಾ ಕಾರ್ಯಕರ್ತರು,ಪಟ್ಟಣದ ಜನರು ಪಾಲ್ಗೊಂಡಿದ್ದರು.
ವರದಿ: ಜಗದೀಶ್ ಕುಮಾರ್
