ಬಳ್ಳಾರಿ / ಕಂಪ್ಲಿ : ಇಲ್ಲಿಯ ಅಕ್ಕಮಹಾದೇವಿ ಮಹಿಳಾ ಮಂಡಳಿಯಿಂದ ಅಕ್ಕನ ಜಯಂತೋತ್ಸವ ಅಂಗವಾಗಿ ಕಳಸಾರೋಹಣ, ಅನುಭವ ಮಂಟಪ ಕಟ್ಟಡ ಉದ್ಘಾಟನೆ, ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಳಸಾರೋಹಣ ನಿಮಿತ್ತ ಪೇಟೆ ಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ನೂತನ ಕಳಸ ಮೆರವಣಿಗೆ ಅಕ್ಕಮಹಾದೇವಿ ದೇವಸ್ಥಾನದವರೆಗೆ ಸಂಭ್ರಮದಿಂದ ನಡೆಯಿತು. ಸಂಜೆ 6 ರಿಂದ ಅತ್ತಿವೇರಿ ಬಸವಧಾಮ ಪ್ರವಚನಕಾರ್ತಿ ಬಸವ ಮಾತಾಜಿ ಅವರಿಂದ ‘ಶರಣರ ಆಚಾರ ವಿಚಾರ’ ಕುರಿತು ವಿಶೇಷ ಉಪನ್ಯಾಸ ನಡೆಯಿತು.
ವರದಿ : ಜಿಲಾನ್ ಸಾಬ್ ಬಡಿಗೇರ.
