ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಶ್ರೀ ರಾಮಲಿಂಗೇಶ್ವರ ರಥೋತ್ಸವಕ್ಕೆ ಶ್ರೀ ರಾಮಲಿಂಗ ರೆಡ್ಡಿ ದೇಶಮುಖ ಅವರ ಮನೆಯಿಂದ ಕುಂಭ, ತನಾರತಿ, ರಥೋತ್ಸವದ ಕಳಸವನ್ನು ಪಲ್ಲಕ್ಕಿಯಲ್ಲಿ ಪುರವಂತ ಕುಣಿತದೊಂದಿಗೆ 12- 04 -2025 ರಂದು ಶನಿವಾರ ಸಾಯಂಕಾಲ 6:30 ಗಂಟೆಗೆ ಪೂಜ್ಯ ಶ್ರೀ ಮ. ನಿ. ಪ್ರ. ಚಿಕ್ಕ ಗುರು ನಂಜೇಶ್ವರ ಮಹಾಸ್ವಾಮಿಗಳು ಭರತ ನೂರು ಮತ್ತು ಪೂಜ್ಯ ಶ್ರೀ ಷ. ಬ್ರ. ಬಸವಲಿಂಗ ಶಿವಾಚಾರ್ಯರು ಹಿರೇಮಠ ಕೋಡ್ಲಿ ಇವರುಗಳ ಸಮ್ಮುಖದಲ್ಲಿ ಮತ್ತು ಸಮಾಳ,ಬ್ಯಾಂಡ್, ಹಲಗೆ, ಅಪಾರ ಭಕ್ತಾದಿಗಳೊಂದಿಗೆ ಶ್ರೀ ರಾಮಲಿಂಗೇಶ್ವರ ರಥೋತ್ಸವ ಕಾರ್ಯಕ್ರಮವು ಬಹು ವಿಜೃಂಭಣೆಯಿಂದ ಜರುಗಿತು.
ಈ ರಥೋತ್ಸವ ಕಾರ್ಯಕ್ರಮದಲ್ಲಿ ಶ್ರೀ ರಾಮಲಿಂಗ ರೆಡ್ಡಿ ದೇಶಮುಖ ಅಧ್ಯಕ್ಷರು ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಸಮಿತಿ ಕೋಡ್ಲಿ , ಮಲ್ಲಿಕಾರ್ಜುನ್ ಸಪ್ಪಯಗೊಳ್, ಸಿದ್ದು ಪೆದ್ದಿ, ಶಿವು ಸುಲೇಪೇಟ್, ಚಂದಪ್ಪ ಆರ್ ಮೋಘ, ಹಣಮಂತರಾವ್ ಆರ್ ಹಳ್ಳಿ, ಶಬ್ಬೀರ್ ಮಿಯಾ ಸೌದೆಗರ್, ಮಲ್ಲಪ್ಪ ಚಿಂತಕೋಟಿ, ಅಣ್ಣಾರಾವ್ ಪೆದ್ದಿ, ಮಹಾಂತೇಶ ಸ್ವಾಮಿ, ಸಿದ್ದರಾಮಯ್ಯ ಸಪ್ಪಯಗೊಳ್, ಅಣ್ಣಾರಾವ ಅರಳಿ, ರಟಕಲ್ ಪೋಲಿಸ್ ಸಿಬ್ಬಂದಿ, ದೇಶಮುಖ್ ಪರಿವಾರ ಹಾಗೂ ಕೋಡ್ಲಿ ಗ್ರಾಮದ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿಸಿದ್ದರು. ಕೋಡ್ಲಿ ಗ್ರಾಮದ ಪ್ರಮುಖರು, ಹಿರಿಯರು, ಯುವಕರು, ಮಹಿಳೆಯರು, ಮತ್ತು ಸುತ್ತಮುತ್ತಲಿನ ಗ್ರಾಮದ ಜನರು, ಮುಂತಾದವರು ರಥೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ, ರಾಮಲಿಂಗೇಶ್ವರನ ಕೃಪಾ ಆಶೀರ್ವಾದ ಪಡೆದುಕೊಂಡರು.
ವರದಿ: ಚಂದ್ರಶೇಖರ್ ಆರ್ ಪಾಟೀಲ್
