
ಬಳ್ಳಾರಿ / ಕುರುಗೋಡು : ಯುವಕರಲ್ಲಿ ಓದುವ ಅಭ್ಯಾಸ ರೂಡಿಕೊಳ್ಳಬೇಕು. ಅಂಬೇಡ್ಕರ್ ಅವರ ಬದುಕು ಬರಹ ಮತ್ತು ಸಂವಿಧಾನ ಕುರಿತು ಪ್ರತಿಯೊಬ್ಬರೂ ತಿಳಿದುಕೊಂಡು ಸಾಮಾಜಿಕ ಚಿಂತನೆ ಮತ್ತು ಸಂವಿಧಾನದ ಹಕ್ಕು ಪಡೆದುಕೊಳ್ಳಲು ಮುಂದಾಗಬೇಕು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಂದಿದ್ದರಿಂದ ಓದು, ಅಭ್ಯಾಸ ಕಡಿಮೆಯಾಗುತ್ತಾ ಬಂದಿದೆ. ಇಂತಹ ಸಂದರ್ಭದಲ್ಲಿ ಕುರುಗೋಡಿನಲ್ಲಿ ರಾಜ್ಯಮಟ್ಟದ ಮುಕ್ತ ರಸಪ್ರಶ್ನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ.
ಹೌದು ದಿನಾಂಕ 12.04.2025 ರಂದು ಕುರುಗೋಡಿನ ಎಸ್. ಎಲ್. ವಿ. ಫಂಕ್ಷನ್ ಹಾಲ್ ನಲ್ಲಿ ಕುರುಗೋಡು ತಾಲೂಕ ಆಡಳಿತ, ಪೊಲೀಸ್ ಇಲಾಖೆ ಹಾಗೂ ನಾನಾ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 135 ನೇ ಜಯಂತಿ ನಿಮಿತ್ತ ಅಂಬೇಡ್ಕರ್ ಬದುಕು ಬರಹ ಮತ್ತು ಸಂವಿಧಾನ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕಂಪ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 42 ವಿದ್ಯಾರ್ಥಿಗಳು ಭಾಗವಹಿಸಿದರು. 50 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳ ಸುತ್ತು ಈ ಸುತ್ತಿನಲ್ಲಿ 15 ಜನರು ಆಯ್ಕೆಯಾದರು. ನಂತರ 30 ಅಂಕ ಪಡೆದಿರುವ ಇವರಿಗೆ ಮರು ಪರೀಕ್ಷೆ ನಡೆಸಿದರು. ಇದರಲ್ಲಿ ಇಬ್ಬರನ್ನು ಆಯ್ಕೆ ಮಾಡಿದರು. ಹೆಚ್ಚಿನ ಅಂಕ ಪಡೆದಿರುವ 12 ಜನ ಆಯ್ಕೆ ಮಾಡಿ ಸಂವಿಧಾನ ಶಿಲ್ಪಿ ತಂಡ, ಭಾರತ ಭಾಗ್ಯವಿಧಾದ ತಂಡ, ಭಾರತ ರತ್ನ ತಂಡ, ಮಹಾ ನಾಯಕ ತಂಡ, ಜೈ ಭೀಮ್ ತಂಡ, ವಿಶ್ವಜ್ಞಾನಿ ತಂಡ ಸೇರಿ ಒಟ್ಟು ಆರು ತಂಡ ರಚಿಸಿ ಮುಕ್ತ ರಸಪ್ರಶ್ನೆ ಕಾರ್ಯಕ್ರಮ ನಡೆಸಿದರು. ಕುರುಗೋಡಿನ ತಹಶೀಲ್ದಾರರಾದ ನರಸಪ್ಪ, ಸಿಪಿಐ ವಿಶ್ವನಾಥ್ ಹಿರೇಗೌಡ ಮತ್ತು ಕುರುಗೋಡಿನ ಪಿಎಸ್ಐ ಸುಪ್ರೀತ್ ವಿರುಪಾಕ್ಷಪ್ಪ ಅವರು ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರಗಳನ್ನು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರಾಜ್ಮಾ ಟಿಎಂಆರ್, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಭವಾನಿ, ಆಂಗ್ಲ ವಿಭಾಗದ ಉಪನ್ಯಾಸಕರಾದ ದಶರಥ ಅವರು ವಿದ್ಯಾರ್ಥಿಗಳ ಜೊತೆಗೆ ಭಾಗವಹಿಸಿದರು.
ವರದಿ : ಜಿಲಾನ್ ಸಾಬ್ ಬಡಿಗೇರ.
