ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರಮದಾನ ಮತ್ತು ಮಹಿಳಾ ಸಬಲೀಕರಣ ಉಪನ್ಯಾಸ ಕಾರ್ಯಕ್ರಮ

ಬಳ್ಳಾರಿ / ಕಂಪ್ಲಿ : ಪಟ್ಟಣದ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ 4 ನೇ ದಿನದ ಶಿಬಿರದಲ್ಲಿ ವಿಶೇಷವಾಗಿ ಬೆಳಿಗ್ಗೆ 7-30 ಕ್ಕೆ ದ್ವಜಾರೋಹಣದೊಂದಿಗೆ ಆರಂಭಗೊಂಡು. ಕಂಪ್ಲಿ – ಕೋಟೆಯ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ಶಿಬಿರಾರ್ಥಿಗಳಿಂದ ಸ್ವಚ್ಛತೆಯ ಶ್ರಮದಾನ ಕಾರ್ಯಕ್ರಮ ನಡೆಯಿತು. ಜಂಗಲ್ ಬೇಲಿಗಳನ್ನು ಕಡಿದು ಸ್ವಚ್ಛಗೊಳಿಸಿದ ನಂತರ ಸಂಜೆ 4-30 ಚಿಂತನ -3 ರ ಕಾರ್ಯಕ್ರಮ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನೆ ಅಧಿಕಾರಿ ಹಾಲಪ್ಪ ಎಂ.ಎ. ಉಪನ್ಯಾಸ ನೀಡಿ ಮಾತನಾಡಿ ಮಹಿಳಾ ಸಬಲೀಕರಣಕ್ಕಾಗಿ ಸ್ತ್ರೀ ಸ್ವಸಹಾಯ ಗುಂಪುಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಸ್ವ ಉದ್ಯೋಗ ಹಾಗೂ ಕೌಶಲ್ಯ ತರಬೇತಿ ನೀಡಲಾಗಿದೆ. ಸಮಾಜದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಮಹಿಳಾ ಸಬಲೀಕರಣ ಅವಶ್ಯವಾಗಿದೆ’ ಅಸಮಾನತೆ ಮತ್ತು ಕೌಟುಂಬಿಕ ಹಿಂಸೆಯನ್ನು ಮಹಿಳೆಯು ಹಿಂದಿನಿಂದಲೂ ಎದುರಿಸುತ್ತಾ ಬಂದಿರುವುದು ಶೋಚನೀಯ ಎಂದರು. ಮಹಿಳಾ ಸಬಲೀಕರಣ ವಿಷಯ ಬಂದಾಗ ಸಾಮಾಜಿಕ ಮತ್ತು ಆರ್ಥಿಕ ಆಯಾಮದಿಂದ ಪ್ರಸ್ತುತ ಸ್ಥಿತಿಯನ್ನು ವಿಶ್ಲೇಷಿಸಬೇಕಾಗುತ್ತದೆ. ಮಹಿಳೆಯ ಸ್ಥಾನಮಾನ ಮತ್ತು ಹಕ್ಕುಗಳ ವಿಷಯದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ ಆಗಬೇಕಾಗಿರುವುದು ಬಹಳಷ್ಟಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.‌ ನಂತರ ಜೆಸಿಐ ಕಂಪ್ಲಿ ಸೊನಾದ ಅಧ್ಯಕ್ಷ ಜೆಸಿ ಬಿ. ರಸೂಲ್ ಮಾತನಾಡಿ ನಮ್ಮ ಸಂಸ್ಥೆಯು ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ, ಮಹಿಳೆಯ ಶಕ್ತಿ ಅಪಾರವಾದುದು ಸಮಾಜದಲ್ಲಿ ಮಹಿಳೆಯು ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರೂ, ಸಾಧಿಸಿದರೂ ಸ್ಥಾನ ಕೊಡಬೇಕಾದರೆ ಅವಳ ನಾಯಕತ್ವದ ಸಾಮರ್ಥ್ಯ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಕುರಿತು ಅಪನಂಬಿಕೆ ವ್ಯಕ್ತವಾಗುವುದು ವಿಷಾದನೀಯ’ ಎಂದರು. ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸಂಸ್ಥೆಯ ಕೃಷಿ ಅಧಿಕಾರಿ ಸಂಜೀವ್ ಕುಮಾರ್ ಜಲಸಂರಕ್ಷಣೆಯನ್ನು ಕುರಿತಾಗಿ ಜಾಗೃತಿ ಮೂಡಿಸಿ ಭಿತ್ತಿ ಪತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ಜೆಸಿಐ ಪೂರ್ವ ಅಧ್ಯಕ್ಷರಾದ ಜೆಸಿ ಸಂತೋಷ ಕೊಟ್ರಪ್ಪ ಸೋಗಿ ಮಾತನಾಡಿ ಜೆಸಿಐ ನಲ್ಲಿ ಮಹಿಳಾ ಸಬಲೀಕರಣ, ವ್ಯಕ್ತಿತ್ವ ವಿಕಾಸನ ಮಾತನಾಡುವ ಕಲೆ ಹೀಗೆ ಅನೇಕ ತರಬೇತಿಗಳಿದ್ದು ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದು ತಿಳಿಸಿದರು. ಉಪನ್ಯಾಸಕ ಮೇಘರಾಜ ಬಡತನದಲ್ಲಿ ಜನಿಸಿದ ವಿದ್ಯಾರ್ಥಿನಿ ಒಬ್ಬರು ಶ್ರದ್ಧೆಯಿಂದ, ಕಷ್ಟ ಪಟ್ಟು ಅಭ್ಯಾಸ ಮಾಡಿ ಸರ್ಕಾರಿ ಉದ್ಯೋಗ ಹೊಂದಿ ಕುಟುಂಬಕ್ಕೆ ಆಸರೆಯಾಗಿದ್ದಾಳೆ. ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಕಾಶ ಬಿ ನಾಯಕ ನಮ್ಮ ಆಡಳಿತ ಮಂಡಳಿಯ ಮುಖ್ಯ ಉದ್ದೇಶ ಮಹಿಳಾ ಸಬಲೀಕರಣ ಅದಕ್ಕಾಗಿ ಮಹಿಳಾ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿಸಲಾಗಿದೆ. ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ನಂತರ ಮುಖ್ಯ ಅತಿಥಿಗಳಿಗೆ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜೆಸಿರೇಟ್ ಅಮೃತ ಸಂತೋಷ, ಬಿಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕರಾದ ಬಾಲಪ್ಪ, ಬಡಿಗೇರ್ ಜಿಲಾನ್ ಸಾಬ್, ಪ್ರಾಚಾರ್ಯರಾದ ಮದ್ದಾನಪ್ಪ ಬಿಡುನಾಳ, ಜಿ. ಮಹಾಬಲೇಶ್ವರ , ಉಪನ್ಯಾಸಕರಾದ, ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ವಿಜಯಶಂಕರ, ಎ. ನಿರಂಜನ, ಉಮಾ, ರಾಜು ಅಶ್ರೀತ, ಜಡೆಪ್ಪ ಬಿಕೆ, ಗೋಪಾಲ್, ಸುನಿತಾ, ಲಕ್ಷ್ಮಣ್ ನಾಯಕ್, ಮಲ್ಲಿಕಾರ್ಜುನ್ ಎಚ್, ಉಮಾಶ್ರೀ ಸೇರಿದಂತೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಮಾರಿ ಐಶ್ವರ್ಯ ಕಾರ್ಯಕ್ರಮ ನಿರೂಪಣೆ ಕುಮಾರಿ ಶಮಾ ಫರ್ವೀನ್ ಸ್ವಾಗತ, ಕುಮಾರಿ ರಂಜಿತ ವಂದನಾರ್ಪಣೆ‌ ಮಾಡಿದರು.

ವರದಿ : ಜಿಲಾನ್ ಸಾಬ್ ಬಡಿಗೇರ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ