
ಜಾತಿ ಜನಗಣತಿ ಮೂಲಕ ಮತ್ತೊಮ್ಮೆ ಹಡಪದ ಅಪ್ಪಣ್ಣ ಸಮಾಜವನ್ನೇ ಮೂಲೆ ಗುಂಪು ಮಾಡಿದ ಈ ವರದಿಗೆ ತೀವ್ರ ವಿರೋಧ : ಡಾ. ಎಂ ಬಿ ಹಡಪದ ಸುಗೂರ ಎನ್
ವರದಿಯನ್ನು ಒಪ್ಪಿದರೆ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ವಿರೋಧ ಕಟ್ಟಿಟ್ಟ ಬುತ್ತಿ..? ಎಚ್ಚರ…?
ಕಲಬುರಗಿ : ಜಾತಿ ಜನಗಣತಿ ಯಾರೂ ಕೇಳಿಲ್ಲ, ಪ್ರಮುಖವಾಗಿ ಸರ್ವೆ ಸಹ ಸರಿಯಾಗಿ ಆಗಿಲ್ಲ, ಅದರಲ್ಲೂ ಕ್ಷೌರಿಕ ವೃತ್ತಿಯಲ್ಲಿ ಅನೇಕ ಉಪ ಜಾತಿಗಳು ಅಡಗಿವೆ. ಆದರೆ ನಮ್ಮ ಹಡಪದ ಅಪ್ಪಣ್ಣ ಸಮುದಾಯದ ಜನಸಂಖ್ಯೆ ಹಡಪದ ಸಮಾಜದ ಜನಸಂಖ್ಯೆ 94.574 ಮತ್ತು ಲಿಂಗಾಯತ ಹಡಪದ 21.104 ಎಂದು ಜಾತಿ ಗಣತಿ ಇದೆ ಎಂಬುದಾಗಿ ವರದಿಯಾಗಿದೆ, ಈ ಜಾತಿ ಗಣತಿ ಸಮೀಕ್ಷೆ ಹೂರ ಹಾಕಲಾಗಿದೆ ? ಒಟ್ಟು 1,15.678 ಜನಸಂಖ್ಯೆ ಅಷ್ಟೇ ಎಂದು ಬಿಂಬಿಸುವ ಮೂಲಕ ಈ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ. ಮತ್ತು ಈ ಹಡಪದ ಅಪ್ಪಣ್ಣ ಸಮಾಜದ ಹೆಸರು ಬಳಸಿಕೊಂಡು ಜನಸಂಖ್ಯೆ ಕಡಿಮೆ ತೋರಿಸಿ ಇರುವುದಕ್ಕೆ ಈ ಸಮಾಜದ ಜನತೆ ಆತಂಕಕ್ಕೆ ಕಾರಣವಾಗಿದೆ. ?
ನಮ್ಮ ಸಮಾಜವನ್ನು ಒಡೆಯುವ ಹುನ್ನಾರ ಅಡಗಿದೆ ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಡಾ. ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಟೀಕಿಸಿದ್ದಾರೆ.
ವರದಿಯನ್ನು ಮನೆ – ಮನೆಗೆ ಭೇಟಿ ನೀಡಿ ರೂಪಿಸಿಲ್ಲ. ನಾಡಿನ ವಿವಿಧ ಮಠಾಧೀಶರೇ ತಮ್ಮ ಮಠಕ್ಕೂ ಬಂದಿಲ್ಲವೆಂದು ಹೇಳಿದ್ದಾರೆ. ಅದರಂತೆ ತಮ್ಮ ಮನೆಗೂ ಬಂದಿಲ್ಲ. ಹೀಗಿದ್ದ ವರದಿ ಹೇಗಾಗುತ್ತದೆ ಎಲ್ಲೋ ಒಂದೇಡೆ ಕುಳಿತು ರೂಪಿಸಿದ ವರದಿ ಇದಾಗಿದೆ. ಈ ಸಮೀಕ್ಷೆ ಮಾಡಲು ಎರಡು ಸಾವಿರ ಕೋಟಿ ಹಣ ಬಳಸಿಕೊಂಡಿದೆ ರಾಜ್ಯ ಸರ್ಕಾರ ಎಂದು ಆರೋಪಿಸಿದ್ದಾರೆ.
ಜಾತಿ ಜನಗಣತಿ ರೂಪಿಸುವ ಸಂದರ್ಭದಲ್ಲಿ ಒಮ್ಮೆಯೂ ಜಾಗೃತಿ ಮೂಡಿಸಿಲ್ಲ. ಪತ್ರಿಕಾ ಹೇಳಿಕೆಯೂ ನೀಡಿಲ್ಲ. ಒಟ್ಟಾರೆ ಈಗ ಸಲ್ಲಿಕೆಯಾದ ವರದಿ ನಂಬಲಾರ್ಹವಾಗಿದೆ. ಒಟ್ಟಾರೆ ಇದು ಖಂಡನೆಯಾಗಿದೆ.? ಪ್ರಮುಖವಾಗಿ ಈ ಕಾಂತರಾಜ ವರದಿ ಮೂಲಕ ಕಾಂಗ್ರೆಸ್ ಹಾಗೂ ಸಿ.ಎಂ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವೀರಶೈವ – ಮತ್ತು ಲಿಂಗಾಯತ ಸಮುದಾಯ ಹಾಗೂ ಒಳಪಂಡಗಗಳನ್ನು ಒಡೆದು ಆಳುವ ನೀತಿ ಎತ್ತಿ ತೋರಿಸುತ್ತದೆ ಎಂದು ಡಾ. ಎಂ ಬಿ ಹಡಪದ ಸುಗೂರ ಎನ್ ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ 2017-18 ರಲ್ಲೂ ವೀರಶೈವ ಲಿಂಗಾಯತ ಧರ್ಮ ಮತ್ತು ಈ ಲಿಂಗಾಯತ ಧರ್ಮದ ಅನೇಕ ಒಳ ಪಂಗಡಗಳು ಒಡೆಯಲು ಮುಂದಾಗಿದ್ದಾಗ ಜನ ತಕ್ಕ ಪಾಠ ಕಲಿಸಿದ್ದಾರೆ. ಈಗ ಮತ್ತದೇ ನೀತಿ ಅನುಸರಿಸಿದೆ. ಬರುವ ವಿಧಾನಸಭೆ (ಹಾಗೂ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ ) ಚುನಾವಣೆಯಲ್ಲಿ ತಕ್ಕಪಾಠ ನಿಶ್ಚಿತ. ಆದ್ದರಿಂದ ಸರ್ಕಾರ ವರದಿ ಒಪ್ಪಲು ಮುಂದಾಗಬಾರದು ಎಂದಿದ್ದಾರೆ.
ನಾವು ಹಡಪದರು ನಮ್ಮನ್ನು ಒಂದು ಕಡೆ ಒಬಿಸಿ ಯವರೂ ನಮ್ಮವರು ಅಂತಾರೆ, ಮತ್ತೊಂದೆಡೆ ವೀರಶೈವ ಲಿಂಗಾಯತ, ಲಿಂಗಾಯತ ಪಂಗಡದವರು ಸಹ ಹಡಪದ ಅಪ್ಪಣ್ಣ ಸಮಾಜದದವರು ನಮ್ಮವರು ಅಂತಾ ಬಾಯಲ್ಲಿ ಅಂತಾರೆ ವಿನ: ಕೃತಿಯಲ್ಲಿ ಈ ಮೂರು ಪಂಗಡಗಳು ನಮ್ಮ ಸಮಾಜಕ್ಕೆ ಆದ ಅನ್ಯಾಯ ಪ್ರಶ್ನಿಸಲ್ಲ ? ಒಟ್ಟಾರೆ ಜಾತಿ ಗಣತಿಗೇ ಹಡಪದ ಸಮಾಜದಿಂದ ವಿರೋಧವಿದೆ ಎಂದು ಸುಗೂರ ಎನ್ ಅವರು ಈ ಕಾಂತರಾಜ ವರದಿಗೆ ಮಾರ್ಮಿಕವಾಗಿ ಕಿಡಿಕಾರಿದ್ದಾರೆ.
ಜಾತಿ ಗಣತಿಗೆ ನಮ್ಮ ವಿರೋಧ ಇಲ್ಲ. ಆದರೆ ಈಗ ನಡೆಸಿರುವ ಜಾತಿ ಗಣತಿ ರೀತಿ ಬಗ್ಗೆ ಆಕ್ಷೇಪಣೆ ಇದೆ. ಮನೆ ಮನೆಗೆ ತೆರಳಿ ಜಾತಿ ಗಣತಿ ನಡೆಸಬೇಕು. ಆ ಕೆಲಸವಾಗಿಲ್ಲ. ಇದು ಸಿದ್ದರಾಮಯ್ಯನವರು ಹೇಳಿ ಬರೆಸಿರುವ ವರದಿ ಎಂದು ಪುನರುಚ್ಚರಿಸಿದರು.
ಜಾತಿ ಗಣತಿ ವರದಿಗೆ ರಾಜಕೀಯ ಗಂಧ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ವರದಿ ಮಂಡನೆಗೆ ಮುಂದಾಗಿದ್ದಾರೆ ಅಷ್ಟೇ ಎಂದರು.
ವರದಿಯಲ್ಲಿ ಯಾವುದೇ ಅಂಕಿ ಸಂಖ್ಯೆಗಳಿಲ್ಲ. ವಿಧಾನಸಭಾ ( ಜಿಲ್ಲಾ ಮತ್ತು ತಾಲೂಕು ಪಂಚಾಯತ್ ) ಚುನಾವಣೆಯಲ್ಲಿ ಅಶಾಂತಿ ಕದಡುವ ಮೂಲಕ ಲಾಭ ಪಡೆಯುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿರುವುದು ಈ ಮೂಲಕ ಕಂಡು ಬರುತ್ತಿದೆ. ಒಂದು ವೇಳೆ ಸಲ್ಲಿಕೆಯಾದ ವರದಿ ಒಪ್ಪಲು ಮುಂದಾಗಿದ್ದಲ್ಲಿ ಕಾಂಗ್ರೆಸ್ 12ನೇ ಶತಮಾನದ ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿಗಳಾದ ನಿಜಸುಖಿ ಹಡಪದ ಅಪ್ಪಣ್ಣನವರ ಸಮುದಾಯ ಮೂಲ ನಿವಾಸಿಗಳು ಮತ್ತು ಈ ಕ್ಷೌರಿಕ ವೃತ್ತಿಯನ್ನು ಮಾಡುವ ಮೂಲಕ ಇದೇ ಕನ್ನಡ ನಾಡಿನಲ್ಲಿ ಹುಟ್ಟಿದ ಕನ್ನಡಿಗರು. ಈ ಹಡಪದ ಅಪ್ಪಣ್ಣ ಸಮಾಜದ ಜನಸಂಖ್ಯೆ ನಮ್ಮ ಕರ್ನಾಟಕ ರಾಜ್ಯದಲ್ಲಿ 12 ರಿಂದ 14 ಲಕ್ಷ ಜನಸಂಖ್ಯೆ ಹೊಂದಿದೆ. ಬೆರಳೆಣಿಕೆಯಷ್ಟು ಎಷ್ಟು ಜನಸಂಖ್ಯೆ ತೋರಿಸಿ. ಈ ಸಮಾಜದ ಜನಸಂಖ್ಯೆ ಹೂರ ಹಾಕದೇ ಇರುವುದು ಮತ್ತು ಈ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಅನೇಕ ಉಪ ಜಾತಿಗಳು ನಾಯಿಂದ, ನಾವಿ, ಕ್ಷೌರಿಕ, ಕ್ಷೌರದ, ಕೆಲಸಿಗ, ನಾಪಿಂಗ್, ನಯನಜ, ಕ್ಷತ್ರಿಯ, ಭಂಡಾರಿ, ಹಡಪಿಗ, ಈ ಎಲ್ಲಾ ಉಪ ಜಾತಿಗಳು ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜಕ್ಕೆ ಸೇರಿವೆ. ಈ ಹಡಪದ ಅಪ್ಪಣ್ಣ ಸಮಾಜದ ಹೆಸರು ಹೇಳಿದೆ ಇರುವುದು ಅನುಮಾನಕ್ಕೆ ದಾರಿ ಮಾಡಿಕೊಡುತ್ತದೆ. ಈ ಹಡಪದ ಅಪ್ಪಣ್ಣ ಸಮಾಜಕ್ಕೆ ಈ ಕಾಂತರಾಜ ವರದಿಯಲ್ಲಿ ಈ ಸಮುದಾಯ ಕ್ಕೆ (ಬಾರಿ ವಿರೋಧಿ ಧೋರಣೆ ) ಮತ್ತು ಈ ಸಮುದಾಯಕ್ಕೆ ಮೋಸ ಮಾಡಿದ್ದು ಸಾಬೀತಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ವರದಿ ಒಪ್ಪಲು ಮುಂದಾದರೆ ನಮ್ಮ ಕರ್ನಾಟಕ ರಾಜ್ಯದ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಜನ ಬೀದಿಗಿಳಿದು ರೊಚ್ಚಿಗೆದ್ದರೆ ಮುಂದಾಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಸುಗೂರ ಎನ್ ಎಚ್ಚರಿಕೆ ನೀಡಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಸಣ್ಣ ಸಮುದಾಯಕ್ಕೆ ಅನ್ಯಾಯವಾಗಿದೆ ಇದನ್ನು ಸರಿಪಡಿಸಲು ಈ ಸಮುದಾಯದ ನಾಯಕರು ಜೊತೆಯಲ್ಲಿ ಪೂಜ್ಯರ ಜೊತೆಯಲ್ಲಿ ಸಮುದಾಯದ ಮುಖಂಡರ ನೇತೃತ್ವದಲ್ಲಿ ಚರ್ಚೆ ಆಗಲಿ.
ಜಾತಿ ಜನಗಣತಿ ವರದಿಯನ್ನು ಕಾಂಗ್ರೆಸ್ ಶಾಸಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಜನಗಣತಿ ಅವೈಜ್ಞಾನಿಕವಾಗಿದೆ, ಈ ಕುರಿತು ಚರ್ಚೆಗೆ ಕರೆದರೆ ನಮ್ಮ ಹಡಪದ ಅಪ್ಪಣ್ಣ ಸಮಾಜವು ಸಿದ್ದವಿದೆ ಎಂದಿದ್ದಾರೆ.
- ಕರುನಾಡ ಕಂದ
