ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲುಕಿನ ಹಡಗಲಿ ಗ್ರಾಮದ ಲಿಂ. ರುದ್ರಮುನೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವವು ಸಕಲ ವಾದ್ಯ ಮೇಳದೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಅಂದು ಗಂಗೂರ ಭದ್ರಶೆಟ್ಟಿರವರ ಮನೆತನದ ಹಾಗೂ ದೈವದವರಿಂದ ಕಳಸ, ಹಿರೇಮಳಗಾಂವಿ ದೈವದವರಿಂದ ತೇರಿನ ಹಗ್ಗ, ಕಿರಸೂರ ದೈವದವರಿಂದ ನಂದಿಕೋಲು, ಹೂವನೂರ ಗ್ರಾಮದ ದೈವದವರಿಂದ ತಳಿರು ತೋರಣ ಬಾಳೆಕಂಬ ಸಾಯಂಕಾಲ ಗ್ರಾಮಕ್ಕೆ ತಲುಪಿದ ನಂತರ ಕಳಸವನ್ನು ರಥಕ್ಕೆ ಏರಿಸಲಾಯಿತು. ನಂತರ ಭಕ್ತರು ರಥದ ಹಗ್ಗ ಏಳೆಯುವ ಮೂಲಕ ಭಕ್ತಿ ಭಾವದಲ್ಲಿ ಪರವಶರಾದರು.
ಬಣ್ಣ ಬಣ್ಣದ ಧ್ವಜ, ಬಾಳೆಕಂಬಗಳ ವಿವಿಧ, ಬಗೆಯ ಹೂಗಳಿಂದ ಶೃಂಗಾರ ಮಾಡಿದ ಭವ್ಯವಾದ ರಥೋತ್ಸವ ನೋಡುಗರ ಕಣ್ಮನ ಸೆಳೆಯಿತು.
ರಥೋತ್ಸವವನ್ನು ಹಡಗಲಿ ನಿಡಗುಂದಿಯ ರುದ್ರಮುನಿಗಳ ಶ್ರೀಗಳ ಕರ್ನಾಟಕ ವೀರಶೈವ ಲಿಂಗಾಯತ, ಅಭಿವೃದ್ಧಿ ನಿಗಮದ ಅಧ್ಯಕ್ಷ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಚಿತ್ತವಾಡಿಗಿಯ ಡಾ. ಶಿವರಾಜ್ ಪಾಟೀಲ್ ಹುನಗುಂದದ ಗ್ರಾಮದ ಮಹಾಂತೇಶ ಮದರಿ ಮತ್ತು ಗ್ರಾಮದ ಗಣ್ಯ ಶಂಕರಪ್ಪ ನೇಗಿಲಿ ಸೇರಿದಂತೆ ಸುತ್ತಮುತ್ತಲಿನ ಮುಖಂಡರು ಸಾಮೂಹಿಕವಾಗಿ ಚಾಲನೆ ನೀಡಿದರು.
ರಥೋತ್ಸವದಲ್ಲಿ ಹಡಗಲಿ ಗ್ರಾಮಸ್ಥರು ಸೇರಿದಂತೆ ತಿಮ್ಮಪೂರ, ಚಿತ್ತರಗಿ, ಕಿರಸೂರ, ಬೆಳಗಲ್ಲ, ಇದ್ದಲಗಿ,ಹೂವನೂರ, ಬೇವೂರ, ಹಿರೇಮಳಗಾಂವಿ, ಗಂಗೂರ, ಹುನಗುಂದ, ಇಲಕಲ್ಲ, ಅಮೀನಗಡ, ಮೆದಾನಪೂರ, ಕೂಡಲಸಂಗಮ, ಗಂಜಿಹಾಳ ಸೇರಿದಂತೆ ಅಪಾರ ಅಂಖ್ಯೆಯಲ್ಲಿ ರಥೋತ್ಸವದಲ್ಲಿ ಜನರು ನೇರದದ್ದು ವಿಶೇಷವಾಗಿತ್ತು.
ಸೂಕ್ತ ಬಂದೋ ಬಸ್ತ್:
ಹುನಗುಂದ ಪೊಲೀಸ್ ಠಾಣೆಯ ಸಿಪಿಐ ಸುನಿಲ್ ಸವದಿ ಅಮೀನಗಡ ಠಾಣೆಯ ಪಿಎಸ್ಐ ಶ್ರೀಮತಿ ಜ್ಯೋತಿ ವಾಲೀಕಾರ ಹಾಗೂ ಅಮೀನಗಡ, ಹುನಗುಂದ, ಇಲಕಲ್ಲ ಠಾಣೆಯ ಪೇದೆಗಳು ರಥೋತ್ಸವಕ್ಕೆ ಸೂಕ್ತ ಬಂದೋಬಸ್ ವ್ಯವಸ್ಥೆ ಕಲ್ಪಿಸಿದರು.
- ಕರುನಾಡ ಕಂದ
