ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪಂಪಣ್ಣ ಸಜ್ಜನರವರು ಹಾಗೂ ಮಹಾಂತೇಶ ಸಿ. ಮಠರವರು ಪಿ ಯು ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಬಸವರಾಜ ವಿ ಶಿಂಪಿಯವರನ್ನು ಸನ್ಮಾನಿಸುತ್ತಿರುವುದು.
ಬಾಗಲಕೋಟೆ : ಜಿಲ್ಲೆಯ ಇಲಕಲ್ಲ ತಾಲೂಕಿನ ಕಂದಗಲ ಗ್ರಾಮದ ಸಂಯುಕ್ತ ಕರ್ನಾಟಕ ದಿನಪತ್ರಿಕೆ ವರದಿಗಾರರಾದ ವಿರೇಶ, ಚ, ಶಿಂಪಿ,ಯವರ ಹಿರಿಯ ಸುಪುತ್ರ ಬಸವರಾಜ. ವಿ. ಶಿಂಪಿ ಈ ಸಾಲಿನ ದ್ವಿತೀಯ ಪಿ. ಯು. ಸಿ ವಾರ್ಷಿಕ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಶೇ. 92.5 ರಷ್ಟು ಅಂಕ ಗಳಿಸಿ ಕಂದಗಲ್ಲ ಗ್ರಾಮದ ಕೀರ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಮಾಜಿ ಗ್ರಾ. ಪಂ. ಅಧ್ಯಕ್ಷರು ಹಾಗೂ ಗ್ರಾಮದ ಹಿತಚಿಂತಕರಾದ ಪಂಪಣ್ಣ ಸಜ್ಜನ ರವರು ಈ ಬಾಲಕನನ್ನು ಸನ್ಮಾನಿಸಿ ಮಾತನಾಡಿದರು.
ಲಿಂಗಸೂಗೂರ ನಗರದ ಶಾರದಾ ವಿದ್ಯಾಮಂದಿರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ನೆಡೆಸಿ ತನ್ನ ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾನೆ. ಇಂತಹ ಯುವಕನ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಮತ್ತು ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿ ಈ ನಮ್ಮ ಕಂದಗಲ್ಲ ಗ್ರಾಮದ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಆಶಿಸುತ್ತೇನೆ ಎಂದು ಸಜ್ಜನರವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮಹಾಂತೇಶ ಸಿ.ಮಠ, ಸಂತೋಷ ಗುರುವಿನಮಠ, ಮರಟಗೇರಿ ಗ್ರಾಮದ ಲಿಂಗರಾಜ ಶಿರಗುಂಪಿ, ಇಳಕಲ್ಲಿನ ರಚಿತ ಚೇತನ್ ಭಂಡಾರಿ, ಅವಿನಾಶ ಗೊಂಗಡಶೆಟ್ಟರ, ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷ ಚಂದ್ರಶೇಖರ ಬಸರಿಗಿಡದ, ಮತ್ತು ಅಹಿಂದ ಗ್ರಾಮ ಘಟಕದ ಅಧ್ಯಕ್ಷ ನಿಂಗಪ್ಪ ಪೂಜಾರಿ ಸೇರಿದಂತೆ ಅನೇಕರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
- ಕರುನಾಡ ಕಂದ
