ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಶಕಲಾತಪಲ್ಲಿ ಗ್ರಾಮ ದೇವತೆ ಪಾತುರು ಯಲ್ಲಮ್ಮ ದೇವಿಯ ಜಾತ್ರೆ ವಿಜೃಂಭಣೆಯಿಂದ ನಡೆಯಿತು.
ಏ.13 ಶಕಲಾತಪಲ್ಲಿ ಪಾತುರು ಯಲ್ಲಮ್ಮ ದೇವಿಯ ಗುಡಿಗೆ ಜನರು ತಲೆಯ ಮೇಲೆ ಕುಂಭ ಹೊತ್ತು, ತಾಯಿ ಯಲ್ಲಮ್ಮಗೆ ಉಘೇ ಉಘೇ ಎನ್ನುವ ಜೈಕಾರ ಹಾಕುತ್ತಾ ಪುರುಷರು ಡೊಳ್ಳು ಹಲಗೆ, ವಾದ್ಯ ಸಮೇತ, ಮಹಿಳೆಯರು ಕಳಸ ಸಮೇತ ,ತಾಯಿ ಯಲ್ಲಮ್ಮಗೆ ಭಕ್ತಿ ಶ್ರದ್ಧೆಯಿಂದ ನೈವೇದ್ಯ ಸಮರ್ಪಣೆ ಮಾಡಿ ದರುಶನ ಪಡೆದು ಪುನೀತರಾದರು.
ಇಡೀ ಊರಿಗೆ ಊರು ಹಬ್ಬದ ವಾತಾವರಣದಿಂದ ಕೂಡಿತ್ತು.
ಜಾತ್ರೆಯಲ್ಲಿ ಊರಿನ ಹಿರಿಯ ಮುಖಂಡರು, ಮಾತೆಯರು, ಯುವಕರು, ಚಿಣ್ಣರು ಮತ್ತು ವಿಶೇಷವಾಗಿ ಸುತ್ತ ಮುತ್ತಲಿನ ಬೇರೆ ಗ್ರಾಮದಿಂದ ಬಂದ ಭಕ್ತರು ಜಾತ್ರೆಯಲ್ಲಿ ಸಡಗರ ಸಂಭ್ರಮದಿಂದ ಭಾಗವಹಿಸಿದ್ದರು.
ವರದಿ : ಜಗದೀಶ್ ಕುಮಾರ್
