ಬಳ್ಳಾರಿ : ಹಾವು ಕಡಿತವು ಹಾವಿನ ಕಡಿತದಿಂದ ಉಂಟಾಗುವ ಗಾಯ. ಇದು ಅನೇಕ ವೇಳೆ ಪ್ರಾಣಿಗಳ ವಿಷದಹಲ್ಲುಗಳಿಂದ ಉಂಟಾದ ರಂಧ್ರದ ಗಾಯದ ಪರಿಣಾಮವಾಗಿರುತ್ತದೆ, ಮತ್ತು ಕೆಲವು ವೇಳೆ ವಿಷ ಒಳ ಸೇರುವಿಕೆಯಿಂದ ಜೀವ ಕೊನೆಗೊಳ್ಳುತ್ತದೆ.
ನಾಗರ ಹಾವು ಕಚ್ಚಿ ಬಾಲಕಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ತಾಲೂಕಿನ ಹೊಸ ಮೋಕಾ ಗ್ರಾಮದಲ್ಲಿ ನಡೆದಿದೆ.
ಮೋಕ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಶ್ರಾವಣಿ ಸಾವನ್ನಪ್ಪಿರುವ ಬಾಲಕಿ. ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಬಾಲಕಿಗೆ ಮೂರು ಬಾರಿ ಹಾವು ಹಚ್ಚಿದೆ. ಕೈ ಮತ್ತು ಕಾಲಿಗೆ ಕಚ್ಚಿದ ನಾಗರ ಹಾವು ಕಡಿದರೂ ಎಚ್ಚರವಾಗದೇ ಬಾಲಕಿ ಮಲಗಿದ್ದಳು, ಬೆಳಿಗ್ಗೆ ಬಾಲಕಿ ಮೃತಳಾಗಿದ್ದಾಳೆ. ಇನ್ನೂ ಬೆಳಗ್ಗೆಯಾದರೂ ಸಹ ನಾಗರಹಾವು ಮನೆಯಲ್ಲೇ ಇತ್ತು ಎಂದು ತಿಳಿದುಬಂದಿದೆ.
ಹೊಸ ಮೋಕಾ ಗ್ರಾಮದ ಲಕ್ಷ್ಮಣ ಹಾಗೂ ಶೇಕಮ್ಮ ಎನ್ನುವ ದಂಪತಿಯ ಮಗಳು ಶ್ರಾವಣಿ, ತೀವ್ರ ಬಡತನ ಹಿನ್ನೆಲೆ ಹಳೆ ಮನೆಯಲ್ಲಿ ವಾಸವಾಗಿದ್ದರು. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ವರದಿ : ಜಿಲನ್ ಸಾಬ್ ಬಡಿಗೇರ.
