ಬಳ್ಳಾರಿ / ಕಂಪ್ಲಿ : ದೇಶಕ್ಕೆ ಅಂಬೇಡ್ಕರ್ ಕೊಡುಗೆ ಅನನ್ಯವಾಗಿದ್ದು, ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಅಂಬೇಡ್ಕರರ ಆದರ್ಶ ಮತ್ತು ತತ್ವಗಳನ್ನು ಬಿತ್ತಬೇಕಿದೆ’ ಎಂದು ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯ ಕಾರ್ಯಧ್ಯಕ್ಷ ರಾಜುನಾಯಕ ಹೇಳಿದರು.
ತಾಲೂಕು ಸಮೀಪದ ಬೈಲೂರು ಮತ್ತು ಕೋಳೂರು ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಅಂಬೇಡ್ಕರ್ ಅವರು ನಡೆದುಬಂದ ಜೀವನ ಮತ್ತು ಸಾಧನೆಯ ಕುರಿತು ತಿಳಿಸಬೇಕು. ವಿದ್ಯಾರ್ಥಿಗಳು ಸಹ ಅಂಬೇಡ್ಕರ್ ಅವರ ಬಗ್ಗೆ ಅಧ್ಯಯನ ಮಾಡಬೇಕು. ಅವರಲ್ಲಿನ ಆದರ್ಶ ಗುಣಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’. ಪ್ರಗತಿಶೀಲ, ದೂರದೃಷ್ಟಿ ವ್ಯಕ್ತಿತ್ವದ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಮಾಜದ ಕೆಳಸ್ತರದ ಜನರನ್ನು ಸಮಾಜಮುಖಿಗೆ ತರುವ ತನ್ನದೇ ಸದ್ವಿಚಾರಗಳನ್ನು ಸಂವಿಧಾನದಲ್ಲಿ ಅಳವಡಿಸಿದರು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕ ಘಟಕದ ಅಧ್ಯಕ್ಷ ಮೇಘರಾಜು, ದಲಿತ ಮುಖಂಡರುಗಳಾದ ನಾಗೇಂದ್ರ, ಮಲ್ಲೇಶ್, ಚನ್ನ, ರಂಗಸ್ವಾಮಿ, ಪಾಲಾಕ್ಷಿ. ಹನುಮಂತಪ್ಪ ಬೇವೂರು, ಚಂದ್ರು ಸೇರಿದಂತೆ ಯುವಕರು ಮತ್ತು ಮಕ್ಕಳು ಇದ್ದರು.
ವರದಿ : ಜಿಲಾನ್ ಸಾಬ್ ಬಡಿಗೇರ.
