ಚಾಮರಾಜನಗರ/ ಹನೂರು : ಮ.ಬೆಟ್ಟದಲ್ಲಿ ಇದೇ ತಿಂಗಳು 24 ರಂದು ನಡೆಯಲಿರುವ ಸಚಿವ ಸಂಪುಟ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಶಾಸಕ ಎಂ. ಆರ್. ಮಂಜುನಾಥ್.
ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಮಲೈ ಮಹದೇಶ್ವರ ಬೆಟ್ಟದ 512 ಮಹಡಿ ಕಾಮಗಾರಿ, ವೀಕ್ಷಿಸಿದ ಸ್ವಚ್ಚತೆ ಹಾಗೂ ಕಾಪಾಡುವಂತೆ ಸೂಚಿಸಿದರು.ದೊಡ್ಡಕೆರೆ ಮುಂಭಾಗದ ರಸ್ತೆ ಹಾಗೂ ಒಳಚರಂಡಿ ದುರ್ವಾಸನೆ ಬರುತ್ತಿರುವುದನ್ನು ಕಂಡು ಗರಂ ಆದ ಶಾಸಕರು ಈ ಕೂಡಲೇ ಸ್ವಚ್ಛತೆಗೆ ಮಾಡುವಂತೆ ಪೌರಕಾರ್ಮಿಕರಿಗೆ ಖಡಕ್ ಸೂಚನೆ ನೀಡಿದರು ಸೂಚಿಸಿದರು.
ಹುಂಡಿ ಎಣಿಕೆ ಕಾರ್ಯ ನಡೆಯುವ ಸ್ಥಳಕ್ಕೆ ಬೇಟಿ ಶಾಸಕರು ಹೆಣಿಕೆ ಕಾರ್ಯವನ್ನು ವೀಕ್ಷಣೆ ಮಾಡಿ ಪ್ರಾಧಿಕಾರದ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ಸಚಿವ ಸಂಪುಟ ಸಭೆ ನಡೆಯುವ ದೀಪದ ಗಿರಿ ಒಡ್ಡಿಗೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಪೂರ್ವ ಸಿದ್ಧತೆಗಳು ಹಾಗೂ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ ಶೀಘ್ರದಲ್ಲಿ ಮುಗಿಸುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ರಘು, ಲೋಕೋಪಯೋಗಿ ಇಲಾಖೆಯ ಎಇಇ ಚಿನ್ನನ್, ಸಂತೋಷ, ಗ್ರಾಂ.ಪಂ,ಕಾರ್ಯದರ್ಶಿ ಶಿವರುದ್ರ, ಮುಖಂಡರುಗಳಾದ ಡಿ.ಕೆ ರಾಜು, ಸಿಂಗಾನಲ್ಲೂರು ರಾಜಣ್ಣ, ಹನೂರು ಮಹಾದೇವ, ಜಯರಾಮು, ಸುರೇಶ್, ಬಸವರಾಜು, ಎಸ್.ಮಹದೇವ್, ತಂಗವೇಲು, ವೆಂಕಟೇಶ್, ಅಭಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
