ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಡಹಳ್ಳಿಯಲ್ಲಿ 134 ನೇ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಭಾರತ ದೇಶದ ಅಪ್ರತಿಮ ಹೋರಾಟಗಾರಗಾರ, ಪ್ರಗತಿಪರ ಚಿಂತಕ, ಸಮಾಜ ಸುಧಾರಕ, ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿದ್ದ, ಮಹಾ ಮಾನವತವಾದಿ, ಸಂವಿಧಾನ ಶಿಲ್ಪಿ ಡಾ ll ಬಿ. ಆರ್. ಅಂಬೇಡ್ಕರರವರು ಭಾರತೀಯ ಸಮಾಜದ ಕೆಳಸ್ತರದಿಂದ ಬಂದು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಬಲ ಹೋರಾಟ ಮಾಡಿ, ಪ್ರಜಾ ಸುತ್ತಾತ್ಮಕ, ಮೌಲ್ಯಗಳನ್ನು ಎತ್ತಿ ಹಿಡಿದು,ಎಲ್ಲರಿಗೂ ಆದರ್ಶ ಪ್ರಾಯಾರಾದವರು. ಭಾರತ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರ ರಾಗಿ ಭಾರತ ಸಂವಿಧಾನ ಜಾರಿಗೆ ಬರುವಲ್ಲಿ ಇವರ ಪಾತ್ರವೂ ಬಹಳ ಮುಖ್ಯವಾಗಿದೆ ಎಂದು ಈ ಸಂದರ್ಭದಲ್ಲಿ ಶ್ರೀಮಂತ ಗಂಜಿ ಮುಖ್ಯ ಗುರುಗಳು ಸ. ಹಿ. ಪ್ರಾ. ಕುಡಹಳ್ಳಿ ರವರು ಮಾತನಾಡಿದರು.
ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಆಚರಣೆ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ರಮೇಶ್ ದೇವನ್ಕರ್ ಹಾಗೂ ಊರಿನ ಹಿರಿಯ ವ್ಯಕ್ತಿ ನಾಗಣ್ಣ ಶಿವುದೇ, ಶಾಲೆಯ ಶ್ರೀಮಂತ ಗಂಜಿ ಮುಖ್ಯ ಶಿಕ್ಷಕರು ಹಾಗೂ ಶಂಕರ ಕಣ್ಣಿ ಶಿಕ್ಷಕರು, ಪ್ರಭಾಕರ್ ಸರ್ ಮತ್ತು ಅಡುಗೆ ಸಿಬ್ಬಂದಿಯವರು ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.
ವರದಿ: ಚಂದ್ರಶೇಖರ್ ಆರ್ ಪಾಟೀಲ್
