ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

134 ನೇ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಜಯಂತಿ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ 134ನೇ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಿ. ಎ. ಸಿ. ಎಸ್ ಅಧ್ಯಕ್ಷರಾದ ಅಣ್ಣಾರಾವ ಪೆದ್ದಿ ರವರು ಮಾತನಾಡಿ ನಮ್ಮ ಭಾರತ ದೇಶ ಸಂವಿಧಾನದ ಬಗ್ಗೆ ಎಷ್ಟು ಹೇಳಿದರು ಸಾಕಾಗಲಾರದು, ನಮ್ಮ ಸಂವಿಧಾನವನ್ನು ಜಾರಿಗೆ ಬಂದು 75 ವರ್ಷಗಳಾಯಿತು ನಮ್ಮ ದೇಶ ಸಂವಿಧಾನವು ಬೇರೆ ದೇಶದ ಸಂವಿಧಾನಕ್ಕೂ ಬಹಳ ವ್ಯತ್ಯಾಸವಿದೆ. ರಷ್ಯಾ,ಚೀನಾ, ಅಮೇರಿಕಾ ದೇಶಗಳು ತಮ್ಮದೇ ಆದ ಸಂವಿಧಾನದ ಅಡಿಯಲ್ಲಿ ದೇಶವನ್ನು ಮುನ್ನಡೆಸುತ್ತವೆ. ನಾವು ಮುಂದಿನ ದಿನಗಳಲ್ಲಿ ನಮ್ಮ ದೇಶವು ವಿಶ್ವಗುರು ಸ್ಥಾನದ ಪಟ್ಟವನ್ನು ಅಲಂಕರಿಸಲಿದ್ದೇವೆ. ಸಂವಿಧಾನವನ್ನು ನೀಡಿದ ಅಂಬೇಡ್ಕರ್, ಸಂವಿಧಾನವನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಂಡು ಓದಬೇಕು, ನಮ್ಮ ದೇಶದ ಸಂವಿಧಾನವನ್ನು ಸೂರ್ಯ ಚಂದ್ರ ಇರುವದು ಎಷ್ಟು ಸತ್ಯವೋ ಅಷ್ಟೇ ಸತ್ಯ ವು ನಮ್ಮ ಸಂವಿಧಾನವು ಅಜರಾಮರವಾಗಿರುತ್ತದೆ. ನಮ್ಮ ಸಂವಿಧಾನವನ್ನು 1950 ಜನವರಿ 26ರಂದು ಸಂವಿಧಾನ ಜಾರಿಗೆ ಬಂದ ದಿನಾಚರಣೆಯಾಗಿ ಆಚರಿಸುತ್ತ ಬಂದಿದ್ದೇವೆ ಎಂದರು.
ಭಾರತದ ಕೀರ್ತಿಯನ್ನು ದೇಶ ವಿದೇಶಗಳಲ್ಲಿ ಹೆಸರುವಾಸಿ ಡಾಕ್ಟರ್. ಬಿ. ಆರ್. ಅಂಬೇಡ್ಕರ್ ರವರು ಮಾಡಿದ್ದಾರೆ. ಇವರು 32 ಪದವಿಗಳನ್ನು ಪಡೆದಿದ್ದಾರೆ. ಕೊಲಂಬಿಯದ ಯೂನಿವರಸೀಟಿ ಯಲ್ಲಿ ಪಿ ಎಚ್ ಡಿ ಪದವಿಯನ್ನು ಪಡೆದು, ಡಾಕ್ಟರೇಟ್ ಪದವಿ ಪಡೆದಿದ್ದಾರೆ, ಒಂದು ಚುನಾವಣೆ ನಡೆಯಬೇಕಾದರೆ ಕಾನೂನಿನ ಅವಶ್ಯಕತೆ ಇದೆ. ಅದಕ್ಕಾಗಿ ಸಂವಿಧಾನವನ್ನು ಬರೆದಿದ್ದರಿಂದ ನಾವೆಲ್ಲರೂ ಅಧ್ಯಕ್ಷರು ಉಪಾಧ್ಯಕ್ಷರು, ಶಾಸಕರು, ವಕೀಲರಾಗಿ ಸಂವಿಧಾನದ ಅಡಿಯಲ್ಲಿ ಆಯ್ಕೆ ಆಗಿರುತ್ತಿದೇವೆ. ನ್ಯಾಯಾಲಯಗಳು, ಉಚ್ಚ ನ್ಯಾಯಾಲಯಗಳು ಕೂಡಾ ಸಂವಿಧಾನದ ಅಡಿಯಲ್ಲಿ ನಡೆಯುತ್ತಿವೆ, ನಮ್ಮ ಸಂವಿಧಾನವು ಪವಿತ್ರ ಗ್ರಂಥವಾಗಿದೆ, ಭಾರತ ಸಂವಿಧಾನ ಸಾಮಾನ್ಯ ಜನರಿಗೆ ದಲಿತರಿಗೂ, ಹಿಂದುಳಿದ ವರ್ಗದವರಿಗೂ ಎಲ್ಲರಿಗೂ ಅನುಕೂಲವಾಗಿದೆ. ಅಂಬೇಡ್ಕರ್ ಅವರ ಜೀವನ, ಶಿಕ್ಷಣ,ಸಂಘಟನೆ, ಹೋರಾಟ ಎಲ್ಲವೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಜಯಂತಿಯನ್ನು ಅರ್ಥಪೂರ್ಣವಾಗಿರುತ್ತದೆ ಈ ಸಂದರ್ಭದಲ್ಲಿ ಶಶಿಕಾಂತ್ ಅಡಕಿ ವಕೀಲರು ಮಾತನಾಡಿದರು.
1950 ಜನವರಿ 26 ರಂದು ಸಂವಿಧಾನ ಜಾರಿಗೆ ಬಂದ ದಿನವಾಗಿರುತ್ತದೆ. ನಮ್ಮ ಜನಾಂಗವನ್ನು ಸ್ವಾತಂತ್ರ್ಯಕ್ಕಿಂತ ಪೂರ್ವದಲ್ಲಿ ದಲಿತರ ಪರಿಸ್ಥಿತಿ ತುಂಬಾ ಚಿಂತಾಕ್ರಾಂತವಾಗಿತ್ತು, ಅಸ್ಪೃಶ್ಯತೆ ಹಕ್ಕು, ಸಾಮಾಜಿಕ ಹಕ್ಕು, ಆರ್ಥಿಕ ಹಕ್ಕು, ಶೋಷಣೆ ಹಕ್ಕು, ಪ್ರಜಾಸತ್ತಾತ್ಮಕ ಹಕ್ಕು ಇವುಗಳನ್ನು ಪಡೆಯಬೇಕಾದರೆ ನಾವುಗಳು ಡಾಕ್ಟರ್ ಬಿ. ಆರ್. ಅಂಬೇಡ್ಕರ್ ರವರು ಸಂವಿಧಾನ ಬರೆದ ನಂತರ ನಾವುಗಳು ನಮ್ಮ ಹಕ್ಕುಗಳನ್ನು ಪಡೆಯುತ್ತಿದ್ದೇವೆ. ಡಾಕ್ಟರ್. ಬಿ. ಆರ್. ಅಂಬೇಡ್ಕರ್ ಅವರು ನಿಜವಾದ ದೇವರು. ಪ್ರತಿನಿತ್ಯ ನಾವುಗಳು ಅಂಬೇಡ್ಕರ್ ರವರನ್ನು ಪೂಜಿಸಬೇಕು ಎಂದು ಹಣಮಂತ ಹಾದಿಮನಿ ರವರು ಮಾತನಾಡಿದರು.
ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ತಮ್ಮ ಬಾಲ್ಯದ ಜೀವನದಲ್ಲಿ ಅನೇಕ ಕಷ್ಟ ನೋವುಗಳನ್ನು ಅನುಭವಿಸಿದ್ದಾರೆ. ಅಂಬೇಡ್ಕರ್ ಅವರು 14 ಏಪ್ರಿಲ್ 1891 ರಲ್ಲಿ ಮಧ್ಯಪ್ರದೇಶದ ಮಾಹೋ ಎಂಬಲ್ಲಿ ಜನಿಸಿದರು. ಇವರ ತಂದೆ ರಾಮಜಿ ಸಕ್ಬಾಲ್ ತಾಯಿ ಭೀಮಾಬಾಯಿ, ಪತ್ನಿ ರಮಾಬಾಯಿ ಅಂಬೇಡ್ಕರ್, ಇವರು ಭಾರತೀಯ ಕರುಡು ಸಮಿತಿಯ ಅಧ್ಯಕ್ಷರಾಗಿದ್ದರು. ಇವರು ಮೊದಲ ಕಾನೂನು ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಬಾಬಾ ಸಾಹೇಬ್. ಭಾರತ ರತ್ನ, ಭಾರತ ಸಂವಿಧಾನದ ಶಿಲ್ಪಿ ಅಂಬೇಡ್ಕರ್ ಅವರನ್ನು ಕರೆಯಲಾಗುತ್ತಿದೆ. ಇವರಿಗೆ ಕಾನೂನಿನ ಡಾಕ್ಟರೇಟ್ ಗೌರವ ಪದವಿ ಲಭಿಸಿದೆ. ಭಾರತ ಸಂವಿಧಾನವನ್ನು ಬರೆಯಬೇಕಾದರೆ ಹಲವಾರು ಪುಸ್ತಕಗಳನ್ನು ಓದಿ ಅದನ್ನು ನೆನಪಿನಲ್ಲಿಟ್ಟುಕೊಂಡು ಸಂವಿಧಾನವನ್ನು ಬರೆದಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದೆ. ಅಂಬೇಡ್ಕರ್ ರವರು 06-12-1956 ರಂದು ದೆಹಲಿಯಲಿ ಮರಣ ಹೊಂದಿದರು. ಅವರ ಜನ್ಮದಿನದ ನೆನಪಿಗಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸುಧಾಕರ್ ಗ್ರಾ. ಪಂ. ಕೋಡ್ಲಿ ರವರು ಮಾತನಾಡಿದರು.
ಸಂವಿಧಾನ ಶಿಲ್ಪಿ, ಬುದ್ಧ, ಬಡವರ, ಕನಸಿನ ಸಮ ಸಮಾಜವನ್ನು ನಿರ್ಮಿಸಲು ಜೀವನವಿಡಿ ಶ್ರಮಿಸಿದ ಸೋದರತ್ವವನ್ನು, ಧರ್ಮವನ್ನು ನಾನು ನಂಬುತ್ತೇನೆ ಎಂದು ಜಗತ್ತಿಗೆ ಸಾರಿದ ಮಹಾನ್ ಚೇತನ ವ್ಯಕ್ತಿ ಅವರೇ ನಮ್ಮ ಹೆಮ್ಮೆಯ ಡಾಕ್ಟರ್. ಬಿ. ಆರ್. ಅಂಬೇಡ್ಕರ್ ಅವರು ಈ ಸಂದರ್ಭದಲ್ಲಿ ಶ್ರೀಮತಿ ಗೀತಾ ಪ್ರೇಮ್ ಕುಮಾರ್ ಅಧ್ಯಕ್ಷರು ಗ್ರಾ. ಪಂ ಕೋಡ್ಲಿ ಮಾತನಾಡಿದರು.
ಕೋಡ್ಲಿ ಗ್ರಾಮ ಪಂಚಾಯತ್ ಆವರಣದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗೀತಾ ಪ್ರೇಮ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವಿಂದ್ರ ಕೊಂಕಲ್, ಗ್ರಾಮ ಪಂಚಾಯತ್ ಸದಸ್ಯರಾದ ಮಲ್ಲಪ್ಪ ಚಿಂತಕುಂಟಾ, ಕೃಷ್ಣ ಸೇರಿ ,ಪಿಎಸಿಎಸ್ ಅಧ್ಯಕ್ಷ ರಾದ ಅಣ್ಣಾರಾವ ಪೆದ್ದಿ ಗ್ರಾಮ ಪಂಚಾಯತ್ ಸದಸ್ಯರಾದ ಅಜೀಜ್ ಮೊಮಿನ್,ಶ್ರೀಕಾಂತ್ ತಾಂಡೂರ,ಬಾಲಾಜಿ ಜಮಾದಾರ,ಸಿದ್ದು ಬುಬಲಿ,ನಿರ್ದೇಶಕರಾದ ಶಿವಲಿಂಗಪ್ಪ ಸುಲೇಪೇಠ, ಚನ್ನಾರೆಡ್ಡಿ ದೇಶಮುಖ, ಶಂಕ್ರಪ್ಪ ಶಿರೂರ, ಶಂಕರ್ ಹಳ್ಳಿ, ಸಿದ್ದರಾಮಪ್ಪ ಹಳ್ಳಿ ಮಾಜಿ ಗ್ರಾ. ಪಂ ಅಧ್ಯಕ್ಷರು ಕೋಡ್ಲಿ.ಗ್ರಾಮ ಪಂಚಾಯತ್ ಸರ್ವ ಸದಸ್ಯರು ಸಿಬ್ಬಂದಿ ವರ್ಗದವರು, ಲೋಕೇಶ್ ತೆಂಗಳಿ, ಅನಿಲ್ ಕುಮಾರ್ ಹೊಸಮನಿ, ಶಿವರಾಜ್ ಕಟ್ಟಿಮನಿ, ಜೈ ಭೀಮ್ ಚಿಂತಕೂಟ, ಭಾಗ್ಯವಂತ ಸೇರಿ, ಪ್ರವೀಣ್ ಕೊಡದೂರ, ನಾಗೇಶ್ ಸೂಗೂರು, ನಾಗೇಶ್ ದೊಡ್ಡಿಮನಿ, ಸುನಿಲ್ ಹೊಸಮನಿ, ದರ್ಶನ್ ಸೇರಿ, ಜಗನ್ನಾಥ್ ಸೇರಿ, ಅಭಿಜಿತ್ ಕಟ್ಟಿಮನಿ, ಶರಣ ಕುಮಾರ್, ವಿಕಾಸ್ ಸೇರಿ, ಸಿದ್ದು ಕಟ್ಟಿಮನಿ, ನಾಗರಾಜ್ ಕಟ್ಟಿಮನಿ,ಶೈಲಿಶ್, ಪವನ್, ನಾಗೇಶ್, ದಿಲೀಪ್ ಕುಮಾರ್ ಎಲೆಪಳ್ಳಿ, ದಿಲೀಪ್ ಕೋಡ್ಲಿ, ದಶರಥ ಎಸ್. ದೇವರು ಮುಂತಾದವರು ಭಾಗವಹಿಸಿದ್ದರು.

ವರದಿ: ಚಂದ್ರಶೇಖರ್ ಆರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ