ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಡಿಗ್ರಾಮ ವಾದಂತಹ ಟಿ ಕಲ್ಲಹಳ್ಳಿಯಲ್ಲಿ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಜಯಂತಿಯನ್ನು ತುಂಬಾ ಸರಳತೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗುರುಮೂರ್ತಿ ಶಿಕ್ಷಕರು ಮಾತನಾಡುತ್ತಾ ದೇಶ ಕಂಡ ಮಹಾನ್ ವ್ಯಕ್ತಿ ಈ ದಲಿತ ಸೂರ್ಯ. ವಿಶ್ವರತ್ನ, ಮಹಾಜ್ಞಾನಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಇಂದು ಅವರು ಕೊಟ್ಟಿರುವಂತಹ ಸಂವಿಧಾನ ಭಾರತಕ್ಕೆ ಶ್ರೇಷ್ಠತೆ ತಂದು ಕೊಟ್ಟಿದೆ ಇವತ್ತು ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ ಎಂದರೆ ಅದಕ್ಕೆ ಮಹತ್ವ ಕೊಟ್ಟಿದ್ದು ನಮ್ಮ ಬಾಬಾ ಸಾಹೇಬರು ಒಂದು ಹೆಣ್ಣು ಶಿಕ್ಷಣವಂತರಾಗಬೇಕೆಂದು,ತಪ್ಪು ಮಾಡಿದಾಗ ಕಾನೂನು ಸಚಿವ ಸ್ಥಾನದಿಂದಾನೆ ರಾಜೀನಾಮೆ ನೀಡಿ ಹೊರ ಬರುತ್ತಾರೆ ಅವರು ಕೊಟ್ಟಿರುವ ಸಂವಿಧಾನದಿಂದ ಇಂದು ಅದು ಸಾಧ್ಯವಾಗುತ್ತದೆ ಅದರ ಅಡಿಯಲ್ಲಿ ನಾವು ಜೀವನ ಸಾಗಿಸಲು ಸಹ ದಲಿತರಿಗೆ ಒಂದು ಅನುವು ಮಾಡಿಕೊಟ್ಟರು ಎಂದರು. ಗ್ರಾಮ ಸಹಾಯಕ ತಿಪ್ಪೇಸ್ವಾಮಿ ಅವರು ಮಾತನಾಡುತ್ತಾ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಆಶಯದಂತೆ ಅವರ ತತ್ವ ಆದರ್ಶಗಳನ್ನು ಈಗಿನ ಯುವಕರು ಮೈಗೂಡಿಸಿಕೊಂಡು ಅವರಂತೆ ಉನ್ನತ ಸ್ಥಾನದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಸಾಧನೆಯನ್ನು ಮಾಡಬೇಕು ಎಂದು ಆಶಿಸುತ್ತಾ ಇಂದು ಭೀಮ ಜಯಂತಿಯ ಶುಭಾಶಯಗಳು ತಿಳಿಸುತ್ತಾ ಸಂವಿಧಾನದ ಮಹತ್ವವನ್ನ ಅರಿತುಕೊಳ್ಳಿ ಬಾಬಾ ಸಾಹೇಬ್ ಅವರ ಆದರ್ಶಗಳು ನಮಗೆ ದಾರಿ ದೀಪವಾಗುತ್ತದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಊರಿನ ಮುಖಂಡರು ದಳಪತಿ ವೀರೇಶ್, ನಿರಂಜನ್ ಗೌಡ್ರು, ವಿಜಯ ಗೌಡ್ರು, ದಲಿತ ಮುಖಂಡರುಗಳಾದ ಡಿ ಬಸವರಾಜ್, ರುದ್ರಮುನಿ, ಗ್ರಾಮ ಸಹಾಯಕ ತಿಪ್ಪೇಸ್ವಾಮಿ, ಸಿದ್ದೇಶ್ ಬಿ, ಕೆಂಚಣ್ಣ, ಶಿಕ್ಷಕರು ಗುರುಮೂರ್ತಿ , ಸೇರಿದಂತೆ ಪ್ರಹ್ಲಾದ, ನಾಗರಾಜ್, ಅಡಿವೆಪ್ಪ, ಗಗನ್ ಹಾಗೂ ಗ್ರಾಮಸ್ಥರು ಸೇರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
