
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮವಾಗಿರುವ ಟಿ. ಕಲ್ಲಹಳ್ಳಿ ದಲಿತ ಕಾಲೋನಿಯ “ಒಂದನೇ ವಾರ್ಡಿನಲ್ಲಿ” ವಿದ್ಯುತ್ ಕಂಬಗಳು ಸರಿಪಡಿಸದೆ ನಿರ್ಲಕ್ಷತನದಿಂದ ಅಲ್ಲಿನ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಒಂದನೇ ವಾರ್ಡಿನಲ್ಲಿ ಬರುವಂತಹ ಸಮಸ್ಯವಾಗಿದೆ, ” ಸುಳ್ಳಜ್ಜರ ಹನುಮಂತಪ್ಪ ಅವರ ಮನೆಯ ಹತ್ತಿರದಿಂದ ಅಜ್ಜಪ್ಪರ ಮನೆಯ” ಮುಂದಿನವರೆಗೆ ವಿದ್ಯುತ್ ಕಂಬಗಳ ಲೈನ್ ವೈರುಗಳು ಜೋತು ಬಿದ್ದು ಅನಾಹುತಗಳು ಸಂಭವಿಸುವ ಪರಿಸ್ಥಿತಿಯಲ್ಲಿದೆ “ಸಿಡ್ಲಾಜ್ಜರು ಲಕ್ಷ್ಮಣನವರ ಮನೆಯ ಛಾವಣಿಯ ಮೇಲೆ ಒಂದು ಅಡಿಯ ಅಂತರವಿಲ್ಲದೆ “ಸಹ ಹಾದುಹೋಗಿದೆ ಸುಮಾರು ಸರಿ ಅಲ್ಲಿನ ಅಧಿಕಾರಿಗಳು ಬಂದು ನೋಡಿದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷತನದಿಂದ ಹೋಗಿದ್ದಾರೆ ಹಿಂದೆ ಎರಡು ಬಾರಿ ಗಾಳಿ ಮಳೆಗೆ ಮನೆಯ ಛಾವಣಿ ಮೇಲೆ ವಿದ್ಯುತ್ ವೈರು ಬಿದ್ದಿದ್ದರೂ ಸಹ ಅದನ್ನು ಗಮನಹರಿಸದೆ ಅಲ್ಲಿನ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಅಧಿಕಾರಿಗಳು ಮನೆಯ ಛಾವಣಿ ಮೇಲೆ ವಿದ್ಯುತ್ ವೈರ್ ಹಾದು ಹೋಗಿದ್ದರಿಂದ ವಿದ್ಯುತ್ ಇಲಾಖೆಯವರಿಗೆ ಸರಿಸುಮಾರು ಎರಡರಿಂದ ಮೂರು ಬಾರಿ ವಿದ್ಯುತ್ ಕಂಬವನ್ನು ಬದಲಾಯಿಸಿಕೊಡಿ ಎಂದು ಅರ್ಜಿಯನ್ನು ಕೊಟ್ಟರೂ ಸಹ ಅವರು ಯಾವುದೇ ತರದ ಗಮನ ಹರಿಸದೆ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ಗುಡುಗು ಸಹಿತ ಗಾಳಿ ಮಳೆ ಇರುವುದರಿಂದ ಮನೆಯವರಿಗೆ ಆತಂಕ ಸೃಷ್ಟಿಯಾಗಿದೆ ಯಾವ ಸಮಯದಲ್ಲಿ ಗಾಳಿ ಬಂದರೆ ಕಂಬ ಉರಳಿ ಮನೆಯ ಛಾವಣಿ ಮೇಲೆ ಬಿದ್ದರೆ ತುಂಬಾ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ ಈಗಾಗಲೇ ಕೆಲವು ಕಡೆ ಗಾಳಿ ಮಳೆ ಮತ್ತು ಸಿಡಿಲಿನಿಂದ ಸುಟ್ಟಿರುವ ನಿದರ್ಶನಗಳು ಇವೆ ಗ್ರಾಮದ ಜನರು ತಾವೇ ತಮ್ಮ ಆಪತ್ತನ್ನು ತಪ್ಪಿಸುವ ಸಲುವಾಗಿ ಅದಕ್ಕಾಗಿ ಮನೆಯ ಛಾವಣಿ ಮೇಲೆ ಒಂದು ಕೋಲನ್ನು ನೆಟ್ಟು ಅಡ್ಡಲಾಗಿ ವಿದ್ಯುತ್ ಪರಿಕರಕಗಳನ್ನು ತಾತ್ಕಾಲಿಕವಾಗಿ ಮೇಲೆ ಎತ್ತಿ ಕಟ್ಟಿಕೊಂಡಿದ್ದಾರೆ. ಸರಿಸುಮಾರು ಎರಡು ಮೂರು ವರ್ಷಗಳಿಂದ ವಿದ್ಯುತ್ ಇಲಾಖೆಯವರಿ ಗೆ ಇದಕ್ಕೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಆದ್ದರಿಂದ ಮುಂದೆ ಏನಾದರೂ ಅನಾಹುತ ಸಂಭವಿಸಿದ್ದಲ್ಲಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಇಲ್ಲಿನ ದಲಿತ ಕಾಲೋನಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
