ಯಾದಗಿರಿ : ಜಿಲ್ಲೆಯ ಶಹಾಪುರ ನಗರದ ನ್ಯಾಯವಾದಿಗಳ ಸಂಘದಲ್ಲಿ ಸಂವಿಧಾನದ ಶಿಲ್ಪಿ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶಹಾಪುರದ ನ್ಯಾಯಾಲಯದಲ್ಲಿ ಹಿರಿಯ ವಕೀಲರಾದ ಚನ್ನಬಸವ ವನದುರ್ಗ ಅವರು ಮಾತನಾಡುತ್ತಾ ನೀವು ಮೊದಲು ಸಂವಿಧಾನದ ಪೀಠಿಕೆ ಓದಿ ಎಂದು ಕಿವಿ ಮಾತು ಹೇಳಿ ಸಂವಿಧಾನದಲ್ಲಿ ನಾಲ್ಕು ಅಂಶಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳಬೇಕು ಅವುಗಳೆಂದರೆ ಸಾರ್ವಭೌಮ, ಜಾತ್ಯಾತೀತ, ಪ್ರಜಾಸತ್ತಾತ್ಮಕ, ಸಮಾಜವಾದಿ ಮತ್ತು ಅವುಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಅದೇ ರೀತಿಯಾಗಿ ಹಿರಿಯ ಶ್ರೇಣಿಯ ನ್ಯಾಯಾಲಯದ ನ್ಯಾಯಾಧೀಶರಾದ ಟಿ. ಪಿ. ಸಿದ್ದರಾಮಪ್ಪ ಅವರು ಮಾತನಾಡಿ ಸಮಾಜದಲ್ಲಿ ಸರಿಯಾಗಿ ಕಾನೂನು ಪಾಲನೆ ಮಾಡಬೇಕು ಎಂದರು. ಮತ್ತು ಅದೇ ರೀತಿಯಾಗಿ ವಕೀಲರ ಸಂಘದ ಅಧ್ಯಕ್ಷರು ಮಾತನಾಡಿ ಅಂಬೇಡ್ಕರ್ ರವರ ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ತಿಳಿಸಿ ಮಹಿಳೆಯರ ಬಗ್ಗೆ ಸಂವಿಧಾನ ಮೂಲಕ ಅವರಿಗೆ ಸರಿಯಾದ ಸ್ಥಾನಮಾನದ ಬಗ್ಗೆ ನೀಡಿರುವ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಸಂತೋಷ ದೇಶಮುಖ, ಜಯಲಾಲ ತೋಟದ ಮನೆ, ಅಮರೇಶ, ಭೀಮರಾಯ ಫರವಿನ್, ಮರೆಪ್ಪ ಸರ್, ಹಯ್ಯಾಳಪ್ಪ ಹೊಸಮನಿ, ದೊಡ್ಡೇಶ, ಸಿದ್ದು ಕನಗನಹಳ್ಳಿ, ಚೇತನ ಹಿರೇಮಠ, ರಾಜೇಂದ್ರ, ಸತ್ಯಮ್ಮ ಮತ್ತು ಸಂಘದ ಪದಾಧಿಕಾರಿಗಳು ಮತ್ತು ಸಂಘದ ಪ್ರಮುಖ ಮತ್ತು ಹಿರಿಯರು ಮತ್ತು ಕಿರಿಯರು ಭಾಗವಹಿಸಿದ್ದರು.
ವರದಿ :ಚೇತನ ಹಿರೇಮಠ
