ಬೀದರ್/ ಬಸವಕಲ್ಯಾಣ : ತಾಲೂಕಿನ ಖಾನಾಪೂರ ಹಾಗೂ ಬಗದುರಿ ಸೀಮೆಯ ಅರಣ್ಯ ಪ್ರದೇಶದಲ್ಲಿ ವೃದ್ದನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರ ದೇಹವನ್ನು ಬಸವಕಲ್ಯಾಣ ನಗರದ ಸರಕಾರಿ ಆಸ್ಪತ್ರೆಗೆ ತಂದಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮುಡಬಿ ಪೋಲಿಸ್ ಠಾಣೆಯ ಪಿ.ಎಸ್ ಐ. ಜಯಶ್ರೀ ಹೊಡಲ್ ಅವರು ಬಂದು ಸಂಬಂಧಿಕರಿಗೆ ವಿಚಾರಿಸಿದಾಗ ಮೃತರಾಗಿದ್ದ ವೃದ್ಧರು ಕಮಲಾಪೂರ ತಾಲೂಕಿನ ಬಾಚನಾಳ ಗ್ರಾಮದ ನಿವಾಸಿ, ಮಾಣಿಕ ತಂದೆ ಲಕ್ಷಿಮಣ ಜಮಾದಾರ ವಯಸ್ಸು: 80 ಎಂದು ತಿಳಿದು ಬಂದಿದ್ದು, ಮೃತರು ಸುಮಾರು ವಷಗಳಿಂದ ಬಸವಕಲ್ಯಾಣ ತಾಲೂಕಿನ ಹಿಪ್ಪರ್ಗಾ ಘಾಟ ಗ್ರಾಮದಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿರುತ್ತದೆ. ಮೃತರಿಗೆ 3 ಜನ ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳಿದ್ದು ಹೆಣ್ಣು ಮಗಳಿಗೆ ಬಸವಕಲ್ಯಾಣ ತಾಲೂಕಿನ ಸಸ್ತಾಪೂರ ಗ್ರಾಮದಲ್ಲಿ ಮದುವೆ ಮಾಡಿಕೊಡಲಾಗಿದೆ ಕಳೇದ ನಾಲ್ಕು ದಿನಗಳ ಹಿಂದೆ ಮಗಳ ಬಳಿ ಉಳಿದ ಮಾಣಿಕ ಜಮಾದಾರರು ನಿನ್ನೆ ಸಾಯಂಕಾಲ 04 ಗಂಟೆಗೆ ಮನೆಯಿಂದ ಹೊರಟು ನಾನು ಹೋಗಿ ಬರುವೆ ಎಂದು ಮಗಳಿಗೆ ಹೇಳಿ ಮನೆಯಿಂದ ಹೊರಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೃದ್ಧರು ಮಾನಸಿಕವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವರದಿ : ಶ್ರೀನಿವಾಸ ಬಿರಾದಾರ
