ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಂವಿಧಾನ ಶಿಲ್ಪಿ ಡಾll ಬಿ. ಆರ್. ಅಂಬೇಡ್ಕರ್ ರವರ ಜಯಂತೋತ್ಸವ

ಕಲ್ಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯತ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಡಾll ಬಿ. ಆರ್. ಅಂಬೇಡ್ಕರವರ ಜಯಂತೋತ್ಸವ ನಿಮಿತ್ಯವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ರಕ್ತದಾನ ಶಿಬಿರ ಸಮಾರಂಭದಲ್ಲಿ ಡಾ ll ಬಿ ಆರ್ ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಡಾ ll ಅಂಬೇಡ್ಕರವರು ಜಗತ್ತಿಗೆ ಸಾಮಾಜಿಕ ಸಮಾನತೆ ಸಾರಿದ ಮಹಾ ನಾಯಕ, ಇವರು ಭಾರತ ದೇಶಕ್ಕೆ ಅತ್ಯ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟು, ಪ್ರತಿಯೊಬ್ಬ ಭಾರತೀಯನಿಗೆ ಪ್ರೇರಣೆಯಾಗಿದ್ದಾರೆ ಎಂದು ಜಗದೇವ ಗುತ್ತೇದಾರ್ ವಿಧಾನ ಪರಿಷತ್ ಸದಸ್ಯರು ಹೇಳಿದರು.


ಸಂವಿಧಾನ ಶಿಲ್ಪಿ, ಡಾ ll ಬಿ. ಆರ್. ಅಂಬೇಡ್ಕರ್ ಅವರು ನಿಜವಾದ ದೇವರು. ಅವರನ್ನು ಪೂಜಿಸಿದರೆ ಸಾಲದು ಅವರ ತತ್ವ ಆದರ್ಶಗಳನ್ನು ನಾವುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು. ಯಾವುದೇ ಒಂದು ಅಧಿಕಾರ ಪಡೆಯಬೇಕಾದರೆ ಸಂವಿಧಾನ ಬದ್ಧವಾಗಿ ಆಯ್ಕೆಯಾಗಿರುತ್ತೇವೆ. ಅಂಬೇಡ್ಕರ್ ಅವರು ಎಲ್ಲರಿಗೂ ಬೇಕಾಗಿರುವ ಮಹಾ ನಾಯಕನಾಗಿದ್ದರೆ. ಎಲ್ಲರಿಗೂ ಸಮಾನ ಹಕ್ಕು, ಸ್ವಾತಂತ್ರ್ಯದ ಹಕ್ಕು ಮತ್ತು ಆರ್ಥಿಕವಾಗಿ ನ್ಯಾಯ ಒದಗಿಸುವ ದೃಷ್ಟಿಯಿಂದ ಸಂವಿಧಾನ ರಚಿಸಿದ ಡಾ ll ಬಿ. ಆರ್ ಅಂಬೇಡ್ಕರ್ ಅವರು ಭಾರತ ದೇಶಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ಶಾಸಕರಾದ ಡಾ ll ಅವಿನಾಶ್ ಜಾಧವ್ ರವರು ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಂಬೇಡ್ಕರ್ ಅವರು ತಮ್ಮ ಬಾಲ್ಯದ ಜೀವನದಲ್ಲಿ ಕಷ್ಟ ನೋವು ಮತ್ತು ಹಲವಾರು ಸಮಸ್ಯೆಗಳನ್ನು ಎದುರಿಸಿ ನಮ್ಮ ದೇಶಕ್ಕೆ ಸಂವಿಧಾನವನ್ನು ಬರೆದು ದೊಡ್ಡ ಸಾಧನೆ ಮಾಡಿದ್ದಾರೆ. ಇಡೀ ಪ್ರಪಂಚಕ್ಕೆ ಇವರು ತತ್ವಜ್ಞಾನಿಯಾಗಿದ್ದಾರೆ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರು ಆಗಿರುವ ಸುಭಾಸ ರಾಠೋಡ್ ರವರು ಈ ಸಂದರ್ಭದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರ ಜಯಂತಿ ನಿಮಿತ್ಯವಾಗಿ ಸ್ಟಾರ್ ಕೇರ್ ಮಲ್ಟಿ ಸ್ಪೆಷಾಲಿಟಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕಾಳಗಿ ಸಹ ಭಾಗಿತ್ವದಲ್ಲಿ, ಉಚಿತ ತಪಾಸಣೆ ಶಿಬಿರ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು ಎಂದು ಜಿ.ಪಂ ಮಾಜಿ ಅಧ್ಯಕ್ಷರಾದ ಭೀಮರಾವ್ ಟಿಟಿ ತಿಳಿದರು.
ಈ ಜಯಂತಿ ಕಾರ್ಯಕ್ರಮದಲ್ಲಿ ಗ್ರೇಡ್ -1 ತಹಸಿಲ್ದಾರ್ ಶ್ರೀಮತಿ ಘಮಾವತಿ ರಾಠೋಡ್,ತಾಪ ಇಒ ಬಸವಲಿಂಗಪ್ಪ ಡಿಗ್ಗಿ, ಸಿಪಿಐ ಜಗದೇವಪ್ಪ ಪಾಳ, ಪಿಎಸ್ಐ ತಿಮ್ಮಯ್ಯ ಬಿ ಕೆ,ಪ ಪಂ. ಮುಖ್ಯ ಅಧಿಕಾರಿ ಪಂಕಜಾ ಎ, ಪಿಡಬ್ಲ್ಯೂಡಿ ಎಇಇ ಮಲ್ಲಿಕಾರ್ಜುನ್ ದಂಡಿನ, ಅಂಬೇಡ್ಕರ್ ಜಯಂತೋತ್ಸವ ಸಮಿತಿಯ ಅಧ್ಯಕ್ಷರು ಗಂಗಾಧರ ಮಾಡಬೂಳ, ರತನ್ ಕನ್ನಡಗಿ, ಕಲ್ಯಾಣ್ ರಾವ್ ಡೊಣ್ಣೂರ್, ಡಾ ll ಮಲ್ಲಿಕಾರ್ಜುನ್ ಗಾಜರೆ, ಜಗದೇವ ಗುತ್ತೇದಾರ, ಶಿವಕುಮಾರ್ ಕಮಕನೂರ,ರೇವಣಸಿದ್ದಪ್ಪ ಕಟ್ಟಿಮನಿ, ಮನೋಜ ಮಂಗಲಗಿ, ಅರ್ಜುನ್ ಎನ್ ಕೆ, ಕಪಿಲ್ ದೊಡ್ಡಮನಿ, ಪ್ರಶಾಂತ್ ಕದಮ, ಖತ್ತಲಪ್ಪ ಅಂಕನ, ಬಾಬು ಡೊಣ್ಣೂರ್, ರವಿ ಮಂತಾ, ಅಮರ ಗೋಟುರ, ಅಂಬರೀಶ್ ಮೋಘ, ಸಂತೋಷ್ ನರನಾಳ್ ಇತರರು ಉಪಸ್ಥಿತರಿದ್ದರು.


ಶಂಕರ್ ಹೆರೂರ್ ನಿರೂಪಿಸಿದರು. ರತನ್ ಕನ್ನಡಗಿ ಸ್ವಾಗತಿಸಿದರು. ಸಂತೋಷ್ ನರನಾಳ ಪ್ರಾಸ್ತಾವಿಕ ನುಡಿ ಮಾತನಾಡಿದರು. ಅಮರ್ ಗೋಟೂರ್ ವಂದಿಸಿದರು.

ವರದಿ :ಚಂದ್ರಶೇಖರ ಆರ್. ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ