ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಿಂದ ಕೆಲವು ಗ್ರಾಮಗಳಿಗೆ ವಾಹನ ಸವಾರರು ತಲುಪಲು ರಸ್ತೆಗಳು ತಗ್ಗು ದಿನ್ನೆಗಳಿಂದ ತುಂಬಿ ತುಳುಕುತ್ತಿವೆ.
ಈ ರಸ್ತೆ ಕೊಟ್ಟೂರು ಪಟ್ಟಣದ ತುಂಗಭದ್ರ B.ED ಕಾಲೇಜ್ ಹತ್ತಿರದಿಂದ ಕೊಟ್ಟೂರು ತಾಲೂಕಿನ ಗ್ರಾಮಗಳಾದ ಜೋಳದ ಕೂಡ್ಲಿಗಿ , ಹನುಮನಹಳ್ಳಿ, ,ಮಡ್ರಳ್ಳಿ ,ಮಾರ್ಗವಾಗಿ ದಾವಣಗೆರೆ ತಲುಪುತ್ತದೆ. ಅದಲ್ಲದೆ ಸ್ಥಳೀಯ ವಾಹನಗಳು ಸೇರಿ ದಿನಕ್ಕೆ ಈ ರಸ್ತೆಯಲ್ಲಿ 500 ಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ.
ಎಷ್ಟೋ ವಾಹನ ಸವಾರರು ಈ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ ಮಳೆ ಬಂದರಂತೆ ಜನರು ಹರಸಾಹಸ ಪಟ್ಟು ಓಡಾಡುವ ಪರಿಸ್ಥಿತಿಯಾಗಿದ್ದರೂ ಇತ್ತ ಕಡೆ PWD ಇಲಾಖೆಯವರು ಗಮನ ಹರಿಸದಿರುವುದು ಒಂದು ದೊಡ್ಡ ದುರಂತ.
ಇನ್ನು ಮುಂದಾದರೂ ಸಂಬಂಧಿಸಿದ ಇಲಾಖೆಯವರು ಇತ್ತ ಕಡೆ ಗಮನ ಹರಿಸಿ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸಿ ವಾಹನ ಸವಾರರು ಓಡಾಡಲು ಅನುಕೂಲವಾಗುವ ರಸ್ತೆಯನ್ನಾಗಿ ನಿರ್ಮಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರಾದ ಎನ್. ಭರ್ಮಣ್ಣ ಹಾಗು ಗ್ರಾಮ ಪಂಚಾಯಿತಿ ಸದಸ್ಯರಾದ ಮಂಗನಹಳ್ಳಿ ಸೋಮಶೇಖರ್ ರವರು ಮಾದ್ಯಮದವರ ಜೊತೆಗೆ ಮಾತನಾಡಿ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕರಿಗೆ ಹಾಗೂ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಶಾಸಕರಿಗೆ PWD ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ದುರ್ಗದಾಸ್, ಹಾಲೇಶಿ, ಮಂಗನಹಳ್ಳಿ, ಜೋಳದ ಕೂಡ್ಲಿಗಿ, ನಾಗರಕಟ್ಟಿ ಗ್ರಾಮಗಳ ಗ್ರಾಮಸ್ಥರು ಇದ್ದರು.
- ಕರುನಾಡ ಕಂದ
