ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಸಮಾಜ ಸೇವಕ, ಇಂಡಿಯನ್ ಟಿವಿ ಸುದ್ದಿವಾಹಿನಿ ಮುಖ್ಯಸ್ಥರಾದ ಎಂ ಕೆ ಯಾದವಾಡ ಅವರು ಸುಮಾರು ವರ್ಷಗಳಿಂದ ಸಾಮಾಜಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡ್ತಾ ಬಂದಿದ್ದಾರೆ.
ಯಾದವಾಡ ಅವರ ಸಮಾಜ ಸೇವೆ ಮತ್ತು ಕಾರ್ಯಗಳನ್ನು ಪರಿಗಣಿಸಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಹಿಂದೂ ಮುಸ್ಲಿಂ ಕ್ರಿಸ್ಚಿಯನ್ ಯುನೈಟೆಡ್ ಸಂಸ್ಥೆಯು ಮಲೇಷ್ಯಾ ದೇಶದ ರಾಜಧಾನಿ ಕೌಲಾಲಂಪುರ್ ದಲ್ಲಿ ನಡೆದ ತನ್ನ 16ನೇ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಂ ಕೆ ಯಾದವಾಡ ಅವರಿಗೆ “ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿ” ಮತ್ತು “ಯುನೈಟೆಡ್ ಸ್ಟೇಟ್ಸ್ ಗ್ಲೋಬಲ್ ಎಕ್ಸಲೆನ್ಸ್ ಪ್ರಶಸ್ತಿ 2025” ಅನ್ನು ನೀಡಿ ಗೌರವಿಸಿತು.
ಪ್ರಶಸ್ತಿ ಪುರಸ್ಕೃತ ಎಂ ಕೆ ಯಾದವಾಡ ಅವರಿಗೆ ಕರ್ನಾಟಕ ಸರ್ಕಾರದ ಮುಖ್ಯ ಸಚೇತಕ ಹಾಗೂ ರಾಮದುರ್ಗ ಶಾಸಕರಾದ ಅಶೋಕ ಪಟ್ಟಣ ಅವರು ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಅಶೋಕ ಪಟ್ಟಣ ಅವರು “ಎಂ ಕೆ ಯಾದವಾಡ ಅವರು ಸರಳ, ಸಜ್ಜನ ಹಾಗೂ ಪ್ರಾಮಾಣಿಕ ವ್ಯಕ್ತಿ, ಖ್ಯಾತ ಪತ್ರಕರ್ತರು,
ಯಾವತ್ತೂ ಕೂಡಾ ಅಭಿವೃದ್ಧಿ ಪರ ಇರುವ ವ್ಯಕ್ತಿ, ಅವರ ಟೀಕೆ ಟಿಪ್ಪಣಿಗಳನ್ನು ನಾವೂ ಹಿತನುಡಿಗಳೆಂದು ಪರಿಗಣಿಸಿ ಅಬಿವೃದ್ಧಿ ಕಾರ್ಯಗಳನ್ನು ಮಾಡ್ತಿದ್ದೇವೆ. ಯಾವುದೇ ಅಧಿಕಾರಿಗಳಾಗಲಿ ರಾಜಕಾರಣಿಗಳಾಗಲಿ ತಪ್ಪು ದಾರಿ ಹಿಡಿದರೆ ಅವರಿಗೆ ತಮ್ಮ ಸುದ್ದಿವಾಹಿನಿ ಮೂಲಕ ಎಚ್ಚರಿಸಿ ಸರಿಯಾಗಿ ಕೆಲಸವನ್ನು ಮಾಡುವಂತೆ ಮಾಡ್ತಿದ್ದಾರೆ.
ಮುಂದೆಯೂ ಕೂಡಾ ಇವರ ಕಾರ್ಯ ಇದೇ ರೀತಿ ಮುಂದುವರೆಯಲಿ, ತಾಲೂಕಿಗೆ ಅವರಂತಹ ಪತ್ರಕರ್ತರ ಅವಶ್ಯಕತೆ ಇದೆ, ಯಾದವಾಡ ಅವರಿಗೆ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿ ದೊರೆತದ್ದು ಸಂತೋಷದ ಸಂಗತಿ ಅವರಿಗೆ ಅಭಿನಂದನೆಗಳು” ಎಂದರು.
ಈ ಸಂದರ್ಭದಲ್ಲಿ ಶಾಸಕರ ಸಹೋದರ ಕಾಂಗ್ರೇಸ್ ಮುಖಂಡ ಪ್ರದೀಪ್ ಕುಮಾರ್ ಪಟ್ಟಣ, ಯುವ ಕಾಂಗ್ರೆಸ್ ಅಧ್ಯಕ್ಷ ಅನಿಕೇತ್ ಪಟ್ಟಣ, ಪತ್ರಕರ್ತ ಸೋಹಿಲ್ ಭೈರಕದಾರ್, ಮುದಸ್ಸರ್ ಯಾದವಾಡ, ಶಿವಣ್ಣ ಚಿಕ್ಕೋಡಿ, ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ಪ್ರದಾನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
- ಕರುನಾಡ ಕಂದ
