ಬೆಂಗಳೂರು: ಉಡುಪಿಯ ‘ರಾಗ ಧನ’ ಕಲಾ ಸಂಸ್ಥೆಯವರು, ಪ್ರಸಿದ್ಧ ಪತ್ರಕರ್ತರು- ಸಂಪಾದಕರು ಆಗಿದ್ದ ಕಲಾವಿಹಾರಿ ಶ್ರೀ ಎ. ಈಶ್ವರಯ್ಯನವರ ಸಂಸ್ಮರಣಾರ್ಥವಾಗಿ ಖ್ಯಾತ ರಂಗ ಕರ್ಮಿ, ಲೇಖಕಿ, ಕಾದಂಬರಿಗಾರ್ತಿ ಶ್ರೀಮತಿ ವೈ ಕೆ ಸಂಧ್ಯಾ ಶರ್ಮ ಅವರನ್ನು ‘ಕಲಾ ವಿಮರ್ಶೆ’ಯ ಸೇವೆಯನ್ನು ಪರಿಗಣಿಸಿ ‘ಕಲಾ ಪ್ರವೀಣ’ ಪ್ರಶಸ್ತಿಯನ್ನು ಮಣಿಪಾಲ ಸಮೀಪದ ಪರ್ಕಳದ ಸರಿಗಮ ಭಾರತಿ ಸಭಾಂಗಣದ ವರ್ಣ ರಂಜಿತ ಸಮಾರಂಭದಲ್ಲಿ ಪ್ರಧಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಶಸ್ತಿ ನೀಡುತ್ತಿರುವುದು ನನ್ನ ಸುಕೃತ, ಅಂಥ ಹಿರಿಯರ ಹೆಸರಿನ ಪ್ರಶಸ್ತಿಗಾಗಿ ನಾನು ಆಭಾರಿ. ನಾನು ಸಾಧನೆ ಮಾಡುವುದು ಇನ್ನೂ ತುಂಬಾ ಇದೆಯಾದರೂ ಪ್ರಶಸ್ತಿಯನ್ನು ವಿನಮ್ರಳಾಗಿ ಸ್ವೀಕರಿಸುತ್ತಿದ್ದೇನೆ ಎಂದು ಸಾಹಿತಿ ಶ್ರೀಮತಿ ವೈ ಕೆ ಸಂಧ್ಯಾ ಶರ್ಮ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
