ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಠಯೋಗಿ ಹುಚ್ಚಿರಪ್ಪಜ್ಜನವರ ರಥೋತ್ಸವ, ಶ್ರೀ ಭೀಮಾಂಬಿಕಾದೇವಿ ಪುರಾಣ ಮಹಾಮಂಗಲ, ಸಾಮೂಹಿಕ ವಿವಾಹ

ಬಡವರ ಪಾಲಿಗೆ ಸಾಮೂಹಿಕ ವಿವಾಹಗಳು ವರದಾನವಾಗಿವೆ : ಶ್ರೀಗಳು

ಕೊಪ್ಪಳ/ ಯಲಬುರ್ಗಾ: ಬಡವರ ಪಾಲಿಗೆ ಸಾಮೂಹಿಕ ವಿವಾಹಗಳು ವರದಾನವಾಗಿವೆ, ಇದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿದೆ ಎಂದು ಬಸವಲಿಂಗೇಶ್ವರ ಸ್ವಾಮೀಜಿ ಅವರು ತಾಲೂಕಿನ ಕರಮುಡಿ ಗ್ರಾಮದ ಹಠಯೋಗಿ ಕೋಡಿಕೊಪ್ಪದ ಶ್ರೀ ಹುಚ್ಚೀರಪ್ಪಜ್ಜನವರ ರಥೋತ್ಸವ, ಶ್ರೀ ಭೀಮಾಂಬಿಕಾದೇವಿಯ ಪುರಾಣ ಮಹಾಮಂಗಲ ಮತ್ತು ಸಾಮೂಹಿಕ ವಿವಾಹಗಳ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಇಟಗಿಯ ಪ್ರವಚನಕಾರ ಡಾ. ಗುರುಶಾಂತವೀರ ಸ್ವಾಮೀಜಿ, ರೋಣದ ಗುಲಗಂಜಿ ಮಠದ, ಗುರುಪಾದ ಸ್ವಾಮೀಜಿ, ನಿಡಗುಂದಿ ಕೊಪ್ಪದ ಚನ್ನಮಲ್ಲಿಮಲ್ಲಿಕಾರ್ಜುನ ಸ್ವಾಮೀಜಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ , ದಮ್ಮೂರ ಭೀಮಾಂಬಿಕಾದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ ದಾನಕೈ, ಮಹಾಂತೇಶ ಶಾಸ್ತ್ರೀ, ಪಿ.ಡಿ.ಓ. ಬಸವರಾಜ ಬಳೋಟಗಿ ,ಡಾ. ಅಂದಾನಪ್ಪ ಅಬ್ಬಿಗೇರಿ ಇತರರು ಮಾತನಾಡಿ ಗ್ರಾಮದ ಸರ್ವ ಭಕ್ತರು ಉತ್ಸಾಹದಿಂದ ಒಗ್ಗಟ್ಟಾಗಿ ಸೇವೆ ಮಾಡುವದರಿಂದ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಎಂದರು.
ಯಲಬುರ್ಗಾದ ಸಂಸ್ಥಾನ ಹಿರೇಮಠದ ಸಿದ್ಧರಾಮೇಶ್ವರ ಸ್ವಾಮೀಜಿ, ಇಟಗಿಯ ಧರ್ಮರ ಮಠದ ಷಣ್ಮುಖಪ್ಫಜ್ಜನವರು ಸಾನಿಧ್ಯವಹಿಸಿದ್ದರು.
ಶಿವಪ್ಪ ಉಳ್ಳಾಗಡ್ಡಿ , ಶರಣಪ್ಪಗೌಡ ಪೋ. ಪಾಟೀಲ , ಶಕುಂತಲಾದೇವಿ ಮಾಲಿ ಪಾಟೀಲ, ಆನಂದ ಮಲ್ಲಿಗವಾಡ , ಗ್ರಾ.ಪಂ. ಸದಸ್ಯರಾದ ರಾಮಣ್ಣ ಹೊಕ್ಕಳದ ,ಪರಸಪ್ಪ ರಾಠೋಡ, ಗಂಗಪ್ಪ ಹವಳಿ ,ಕಾಶಪ್ಪ ಹವಳಿ , ವಿರುಪಾಕ್ಷಪ್ಪ ಉಳ್ಳಾಗಡ್ದಿ ,ಭೀಮಣ್ಣ ಹವಳಿ, ಕೊಟ್ರಯ್ಯಸ್ವಾಮಿ ಹಡಗಲಿ, ವ್ಹಿ.ಎಸ್. ಶಿವಪ್ಪಯ್ಯನಮಠ ,ರುದ್ರಯ್ಯ ಕೆಂಭಾವಿಮಠ ಸೇರಿದಂತೆ ಇತರರು ಇದ್ದರು.
ಮಹಾಂತೇಶ ವಂಕಲಕುಂಟಿ ಹಾಗೂ ಶಿವಪ್ಪ ಮಡಿವಾಳರ ಸಂಗೀತ ಸೇವೆಗೈದರು.
ಹದಿಮೂರು ಸಾಮೂಹಿಕ ವಿವಾಹಗಳು ಜರುಗಿದವು. ಸಂಜೆ ಹುಚ್ಚೀರೇಶ್ವರ ರಥೋತ್ಸವವು ವಿಜೃಂಭಣೆಯಿಂದ ಜರುಗಿತು. ಶ್ರೀ ಕರವೀರಭದ್ರೇಶ್ವರ ಕಲಾ ನಾಟ್ಯ ಸಂಘ ಕರಮುಡಿ ಇವರಿಂದ “ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗರ” ನಾಟಕ ಪ್ರದರ್ಶನಗೊಂಡಿತು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ