ಬೆಂಗಳೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಕೊಲೆ ಆರೋಪದಲ್ಲಿ ಪತ್ನಿ ಪಲ್ಲವಿ ಅವರನ್ನು ಬಂಧಿಸಲಾಗಿದೆ.
ಭಾನುವಾರ ಎಚ್ ಎಸ್ ಆರ್ ಲೇಔಟ್ ಮನೆಯಲ್ಲಿ ಓಂ ಪ್ರಕಾಶ್ ಬರ್ಬರ ಕೊಲೆಯಾಗಿತ್ತು. ಮನೆಯಲ್ಲಿ ಪತ್ನಿ ಪಲ್ಲವಿ ಹಾಗೂ ಮಗಳು ಇದ್ದರು. ತಕ್ಷಣ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಇದೀಗ ಪತ್ನಿ ಪಲ್ಲವಿ ಅವರನ್ನು ಬಂಧಿಸಲಾಗಿದೆ. ಮಗ ಕಾರ್ತಿಕೇಶ್ ನೀಡಿದ ದೂರಿನ ಹಿನ್ನೆಲೆ ತನಿಖೆ ನಡೆಸಲಾಗುತ್ತಿದೆ.
ಕೊಲೆ ಆರೋಪದಲ್ಲಿ ಓಂ ಪ್ರಕಾಶ್ ಅವರ ಪತ್ನಿ ಎ1 ಆರೋಪಿ ಪಲ್ಲವಿಯಾಗಿದ್ದು, ಎ2 ಆರೋಪಿ ಕೃತಿ ಆಗಿದ್ದಾರೆ. ಭಾನುವಾರ ಎಚ್ ಎಸ್ ಆರ್ ಲೇಔಟ್ ಮನೆಯಲ್ಲಿ ಪತ್ನಿ ಪಲ್ಲವಿ ಓಂ ಪ್ರಕಾಶ್ ಅವರಿಗೆ ಚಾಕುವಿನಿಂದ ಇರಿದು, ಅಡುಗೆ ಎಣ್ಣೆ -ಖಾರದ ಪುಡಿ ಬಳಸಿ ಬರ್ಬರವಾಗಿ ಹತ್ಯೆ ಮಾಡಿ, ಬಳಿಕ ಅವರೇ ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ತನಿಖೆ ವೇಳೆ ಆತ್ಮ ರಕ್ಷಣೆಗಾಗಿ ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಬಹಿರಂಗ ಪಡಿಸಿದ್ದಾರೆ.
ಅಂತಿಮ ದರ್ಶನಕ್ಕೆ ಅವಕಾಶ ಇದೀಗ ಓಂ ಪ್ರಕಾಶ್ ಅವರ ಪೋಸ್ಟ್ ಮಾರ್ಟಂ ನಡೆಯುತ್ತಿದ್ದು, ಮಗ ಆಸ್ಪತ್ರೆ ಹೊರಭಾಗದಲ್ಲಿ ದುಃಖತಪ್ತರಾಗಿದ್ದಾರೆ. ಬಳಿಕ ಎಚ್ ಎಸ್ ಆರ್ ಲೇಔಟ್ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್
