ಬೆಳಗಾವಿ/ ಬೈಲಹೊಂಗಲ :
ಉದ್ಯೋಗ ಖಾತ್ರಿ ಕೂಲಿಕಾರರಿಗೆ ಪ್ರತಿಶತ 30% ರಷ್ಟು ರಿಯಾಯಿತಿಯನ್ನು ನರೇಗಾ ಯೋಜನೆ ಒದಗಿಸಿಕೊಟ್ಟಿದೆ ಎಂದು ತಾಪಂ ಸಹಾಯಕ ನಿರ್ದೇಶಕ (ಗ್ರಾ.ಉ) ವಿಜಯ ಪಾಟೀಲ ರವರು ಇಂದು ಗ್ರಾಮ ಪಂಚಾಯತ ಹಣಬರಹಟ್ಟಿ ಮತ್ತು ಮಲ್ಲಾಪೂರ ಕೆ ಎನ್ ವ್ಯಾಪ್ತಿಯ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಕೂಲಿಕಾರರಿಗೆ ಬೇಸಿಗೆ ಅವಧಿಯಲ್ಲಿ ಎಪ್ರೀಲ್, ಮೇ ಮಾಹೆಯಲ್ಲಿ ಕೆಲಸದ ಪ್ರಮಾಣದಲ್ಲಿ ಪ್ರತಿಶತ 30% ರಷ್ಟು ರಿಯಾಯಿತಿಯನ್ನು ಒದಗಿಸಿ ಕೊಟ್ಟಿದೆ ಮತ್ತು ಕೆಲಸದ ಅವಧಿಯಲ್ಲಿಯೂ ಸಹ ಕೂಲಿಕಾರರಿಗೆ ಬದಲಾವಣೆ ಮಾಡಿದೆ ಮುಂಜಾನೆ- 07 ರಿಂದ 01:00 ಗಂಟೆಯೊಳಗಾಗಿ ಎರಡು ಹಂತದ NMMs ಹಾಜರಾತಿಯನ್ನು ಪಡೆದುಕೊಂಡು ನಿಗಧಿ ಪಡಿಸಿರುವ ಅಳತೆ ಪ್ರಮಾಣದಷ್ಟು ಕೆಲಸವನ್ನು ಮಾಡುವಂತೆ ಕರೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ಅತಿಯಾದ ತಾಪಮಾನ ಇರುವುದರಿಂದ ಎಲ್ಲಾ ನರೇಗಾ ಕಾಮಗಾರಿ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಕ್ಯಾನ್ ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಕೂಲಿಕಾರರಿಗೆ ಒದಗಿಸಬೇಕು ಹಾಗೂ ಮೇ ತಿಂಗಳಲ್ಲಿ ಎಲ್ಲಾ ಕೂಲಿಕಾರರಿಗೆ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಕೂಲಿಕಾರರಿಗೆ ತಿಳಿಸಿದರು.
ತಾ.ಪಂ ಐಇಸಿ ಸಂಯೋಜಕರು ಮಾತನಾಡಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಿಶೇಷ ಚೇತನರಿಗೆ ವಿಶೇಷ ಜಾಬಕಾರ್ಡಗಳನ್ನು ನೀಡಲಾಗಿದೆ ಇದರಿಂದ ವಿಶೇಷ ಚೇತನರಿಗೆ ಪ್ರತೇಕವಾಗಿ 100 ದಿವಸ್ ಕೆಲಸ ದೊರೆಯುತ್ತದೆ ಮತ್ತು ಕೆಲಸದ ಪ್ರಮಾಣದಲ್ಲಿ ವಿಶೇಷ ಚೇತನರಿಗೆ 50% ರಷ್ಟು ರಿಯಾಯಿತಿ ಇರುತ್ತದೆ ಅದೇ ರೀತಿಯಾಗಿ ವಯೋವೃದ್ಧರಿಗೂ ಸಹ ಕೆಲಸದಲ್ಲಿ ರಿಯಾಯಿತಿ ಇರುತ್ತದೆ ಎಂದು ಇದೇ ಕಾಮಗಾರಿ ಸ್ಥಳದಲ್ಲಿ ಹಾಜರಿದ್ದ 04 ಜನ ವಿಶೇಷ ಚೇತನರಿಗೆ ಮನವರಿಕೆ ಮಾಡಿದರು.
ಇದೇ ಸಂದರ್ಭದಲ್ಲಿ ತಾ.ಪಂ ಐಇಸಿ ಸಂಯೋಜಕ, ಎಸ್ ವ್ಹಿ ಹಿರೇಮಠ ಗ್ರಾಪಂ ಕಾರ್ಯದರ್ಶಿ, ಎಸ್ ವ್ಹಿ ಗಡ್ಡಿ, ಗ್ರಾ.ಪಂ ಬೇರಪೂಟ ಟೆಕ್ನಿಷಿಯನ್ , ಸಿದ್ರಾಮಯ್ಯ ಹಿರೇಮಠ ಗ್ರಾಮ ಕಾಯಕ ಮಿತ್ರ, ಲಕ್ಷ್ಮೀ ಮಾಶ್ಯಾಗೋಳ, ಅನಸೂಯಾ ಸಣ್ಣಮಲ್ಲಯ್ಯನವರ ಮೇಟ್ ಚಂದ್ರಪ್ಪ ಕೊಳದೂರ ಹಾಗೂ ಕೂಲಿಕಾರರು ಹಾಜರಿದ್ದರು.
ವರದಿ. ಭೀಮಸೇನ ಕಮ್ಮಾರ
