ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕೇರಳಕ್ಕೆ ಹೋಗುವ ರಸ್ತೆಯಲ್ಲಿ ರಾಬರಿ ಮಾಡಲು ಮಚ್ಚು ಲಾಂಗ್ ಹಾಗೂ ಡ್ರ್ಯಾಗನ್ ಅನ್ನು ಬಳಸಿ ಕೆಲವು ಹುಡುಗರು ಕೇರಳಕ್ಕೆ ತೆರಳುವ ಕಾರ್ ಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡಲು ಸಂಚು ಹಾಕುತಿದ್ದರು ಇದರ ಖಚಿತ ಮಾಹಿತಿ ಮೇರೆಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಜಯಕುಮಾರ್ ಹಾಗೂ ಸಾಹೇಬ್ ಗೌಡ ಇವರ ಸಮ್ಮುಖದಲ್ಲಿ ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಅದರಲ್ಲಿ ಕಿಶೋರ್, ಶಾಹಿಲ್, ರವಿ (ಕಪ್ಪೆ ) ಎಂದು ತಿಳಿದು ಬಂದಿದೆ. ಇನ್ನು ಉಳಿದ ಏಳು ಎಂಟು ಜನ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ.
ವರದಿ ಗುಂಡ್ಲುಪೇಟೆ ಕುಮಾರ್
