ಯಾದಗಿರಿ :ಶಹಾಪುರ ಕಛೇರಿ ಮುಂದೆ ಕಸದ ರಾಶಿ ಇದ್ದರೂ ಯಾರೂ ಕೂಡಾ ಈ ಕಡೆ ನೋಡುತ್ತಿಲ್ಲ, ಅಧಿಕಾರಿಗಳು ಕೂಡ ತಮ್ಮ ಕೆಲಸವನ್ನು ನಿರ್ಲಕ್ಷ್ಯ ತೋರಿಸುವ ಮುಂಖಾತರ ತಮ್ಮ ” ಕಾಯಕವೇ ಕೈಲಾಸ ” ಎಂಬ ನಾಣ್ಣುಡಿ ಇವರಿಗೆ ಅನ್ವಯವಾಗದಂತೆ ಇದ್ದಾರೆ.
ಏಕೆಂದರೆ ಇಲ್ಲಿ ಹಿರಿಯ ಮತ್ತು ಅಂಗವಿಕಲರಿಗೆ ಅನುಕೂಲಕರ ಆಗುವ ರೀತಿಯಲ್ಲಿ ಯಾವುದೇ ಸೌಲಭ್ಯ ಹಾಗೂ ಸೌಕರ್ಯಗಳನ್ನು ಒದಗಿಸುವುದರ ಕಡೆ ಗಮನ ನೀಡದಿರುವುದು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಆದ ಕಾರಣ ಇಲ್ಲಿ ಏಜೆಂಟ್ ಮೂಲಕ ಕಾರ್ಯವನ್ನು ಮಾಡಿಸುತ್ತಾರೆ. ಇದರಲ್ಲಿ ಯಾರು ಸರ್ಕಾರದ ನೌಕರರು ಮತ್ತು ಏಜೆಂಟರು ಎಂಬ ಬಗ್ಗೆ ಸಾರ್ವಜನಿಕರಿಗೆ ಅನುಮಾನ ಕಾಡುತ್ತಿದೆ ಅವರಿವರೆನ್ನದೆ ಎಲ್ಲರೂ ಕಛೇರಿ ಒಳಗಡೆ ಹೋಗಿ ಬರುತ್ತಾರೆ. ಸರಿಯಾದ ಸಮಯಕ್ಕೆ ಬರುವುದಿಲ್ಲ ಆದ ಕಾರಣ ಹಿರಿಯ ಅಧಿಕಾರಿಗಳು ಶಹಾಪುರ ಉಪನೋಂದಣಿ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅಂಗವಿಕಲ ಸಂಘದ ರಾಜ್ಯಾಧ್ಯಕ್ಷರಾದ ಸುಭಾಷ್ ಹೋತಪೇಠ ಆಗ್ರಹಿಸಿದ್ದಾರೆ.
- ಕರುನಾಡ ಕಂದ
