ಇಂತಹ ಹೇಯ ಕೃತ್ಯ ಎಸಗಿರುವ ಉಗ್ರರಿಗೆ ತಕ್ಕ ಪಾಠ ಕಲಿಸಬೇಕು – ಚಂದೂಲಾಲ ಚೌಧರಿ
ಯಾದಗಿರಿ/ ಗುರುಮಠಕಲ್: ಪಟ್ಟಣದ ಮಹಾತ್ಮ ಬಸವೇಶ್ವರ ವೃತ್ತದಲ್ಲಿ ಗುರುಮಠಕಲ್ ಪಕ್ಷಾತೀತವಾಗಿ ಹಾಗೂ ವಿವಿಧ ಹಿಂದೂ ಸಂಘಟನೆ, ಸಾರ್ವಜನಿಕರ ವತಿಯಿಂದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂದಲ್ಲಿ ಮಂಗಳವಾರ ನಡೆದ ಭಯಾನಕ ಉಗ್ರವಾದಿ ಕೃತ್ಯವನ್ನು ಖಂಡಿಸಿ ಶ್ರದ್ದಾಂಜಲಿ ನೀಡಲಾಯಿತು. ಇಂತಹ ಘಟನೆಗಳು ಮರು ಕಳಿಸದಂತೆ ಕೇಂದ್ರ ಸರಕಾರ ಹೆಚ್ಚು ಉಗ್ರ ನಿಘ ಪಡೆಗಳನ್ನು ನೇಮಿಸಿ ಮತ್ತೊಮ್ಮೆ ಪುಲ್ವಾಮ ರೀತಿಯಲ್ಲಿ ಉತ್ತರ ನೀಡಬೇಕು,ಇಂತಹ ಹೇಯ ಕೃತ್ಯ ಎಸಗಿರುವ ಉಗ್ರರಿಗೆ ತಕ್ಕ ಪಾಠ ಕಲಿಸಬೇಕು, ಈ ದಾಳಿಯಲ್ಲಿ ದೇಹ ಬಿಟ್ಟ ಅಯಾಕರ 26 ಜೀವಗಳಿಗೆ ಬೆಲೆ ಸಿಗಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ,ಕಣ್ಣಾರೆ ಕಂಡು ಭಯಭೀತವಾದ ಆ ಜೀವಗಳು ಸುಧಾರಿಸಿಕೊಳ್ಳಲಿ ಕೇಂದ್ರ ಸರ್ಕಾರ ಸಾವಿಗೆ ನ್ಯಾಯಕೊಡಲಿ ಎಂದು ಚಂದೂಲಾಲ ಚೌಧರಿ ಹೇಳಿದರು.
ವರದಿ: ಜಗದೀಶ್ ಕುಮಾರ್
