
ಕಂಪ್ಲಿ / ಎಮ್ಮಿಗನೂರ : ಗ್ರಾಮದ ಶ್ರೀ ಜರಿಸಿದ್ದೇಶ್ವರ ಎಜುಕೇಶನಲ್ ಟ್ರಸ್ಟ ವತಿಯಿಂದ ನಾಟಕಕಾರ ಕವಿ ವಿಲಿಯಂ ಸೆಕ್ಸ್ ಪಿಯರ್ ಅವರ ಜನ್ಮದಿನದ ಅಂಗವಾಗಿ ವಿಶ್ವ ಪುಸ್ತಕ ದಿನ ಆಚರಿಸಲಾಯಿತು.
ಈ ವೇಳೆ ಅಧ್ಯಕ್ಷ ಎಸ್ ರಾಮಪ್ಪ ಮಾತನಾಡಿ ಪುಸ್ತಕಗಳು ನಮ್ಮ ನಿಜವಾದ ಗೆಳೆಯರಾಗಿದ್ದು ಓದುವ ಹವ್ಯಾಸ ಬೆಳೆಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಜ್ಞಾನ ಪಡೆದು ಬದುಕನ್ನು ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಅಲ್ಲದೆ ಸಮಯದ ಸಮರ್ಪಕ ಬಳಕೆಗೆ ಪುಸ್ತಕಗಳು ಮಾನವನಿಗೆ ದಾರಿ ದೀಪವಾಗಿವೆ ಅಲ್ಲದೆ ಸೆಕ್ಸ್ಪಿಯರ್ ಉತ್ತಮ ನಾಟಕಗಳ ಮೂಲಕ ಸಾಹಿತ್ಯಗಾರರ ಮನ ಗೆದ್ದ ಕವಿ ಎಂದರು
ನಂತರ ಮಕ್ಕಳಿಗೆ ಪುಸ್ತಕಗಳನ್ನ ವಿತರಿಸಲಾಯಿತು
ಈ ಸಂದರ್ಭದಲ್ಲಿ ಟ್ರಸ್ಟ್ ಪದಾಧಿಕಾರಿಗಳು ಸೇರಿದಂತೆ ಮಕ್ಕಳು ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
