
ಬಳ್ಳಾರಿ / ಕಂಪ್ಲಿ : ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಪ್ರವಾಸಿಗರ ಮೇಲಿನ ನರಮೇಧವನ್ನು ಖಂಡಿಸಿ ನಗರದಲ್ಲಿ ಮೇಣದ ಬತ್ತಿಯನ್ನು ಹಚ್ಚಿಕೊಂಡು ಮೌನ ಮೆರವಣಿಗೆ ನಡೆಸುವ ಮೂಲಕ ಅತ್ಯುಗ್ರವಾಗಿ ಖಂಡಿಸಲಾಯಿತು.
ಪಟ್ಟಣದ ಶ್ರೀ ಉದ್ಭವ ಮಹಾ ಗಣಪತಿ ದೇವಸ್ಥಾನದಿಂದ ಪ್ರಾರಂಭಗೊಂಡು ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು. ವಿಶ್ವಹಿಂದು ಪರಿಷತ್, ಭಜರಂಗದಳ, ಭಾಜಪ ಹಾಗೂ ಸಂಘ ಪರಿವಾರದ ನೇತೃತ್ವದಲ್ಲಿ ಪೈಶಾಚಿಕ ಕುರಿತದಲ್ಲಿ ಪ್ರಾಣತ್ಯಾಗ ಮಾಡಿದವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಅವರ ಮೆರವಣಿಗೆ ನಡೆಸಿದರು ಪ್ರತಿಭಟನಾಕಾರರು ಎರಡು ನಿಮಿಷಗಳ ಕಾಲ ಮೌನಚರಣೆಯನ್ನು ಮಾಡಿದರು ವಿಶ್ವಹಿಂದ್ ಪರಿಷತ್ ಹಾಗೂ ಭಜರಂಗದಳದ ಪ್ರಮುಖರಾದ ಪುಟ್ಟಿ ಸಚಿನ್, ಇಂದ್ರಜಿತ್ ಸಿಂಗ್ , ಎಸ್. ಎನ್. ಗುರುಪ್ರಸನ್ನ , ಭಾಜಪ ಕ್ಷೇತ್ರ ಅಧ್ಯಕ್ಷ ಸಿ.ಡಿ. ಮಹಾದೇವ, ಮಾಜಿ ಅಧ್ಯಕ್ಷ ಅಳ್ಳಳ್ಳಿ ವೀರೇಶ್ ಪುರಸಭಾ ಸದಸ್ಯರಾದ ಡಾ. ವಿ. ಎಲ್. ಬಾಬು, ಎಸ್. ಎಂ. ನಾಗರಾಜ, ಎನ್. ರಾಮಾಂಜನೇಯಲು, ಟಿ.ವಿ. ಸುದರ್ಶನ್ ರೆಡ್ಡಿ, ಪಕ್ಷದ ಮುಖಂಡರಾದ ಮುರಳಿ ಮೋಹನ್ ರೆಡ್ಡಿ, ಜಿ.ಸುಧಾಕರ, ಪಿ. ಬ್ರಹ್ಮಯ್ಯ, ಆಗಳಿ ಪಂಪಾಪತಿ, ಡಿ. ಶ್ರೀಧರ ಶ್ರೇಷ್ಠಿ , ಚಂದ್ರಕಾಂತ್ ರೆಡ್ಡಿ, ಇಟಗಿ ವಿರುಪಾಕ್ಷಿ , ಮಾಜಿ ಶಾಸಕರ ಆಪ್ತ ವಿರೂಪಾಕ್ಷಯ್ಯ ಸ್ವಾಮಿ, ಶಿವಕುಮಾರ, ಭಾಜಪದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಪುರಸಭಾ ಸದಸ್ಯರು, ವಿವಿಧ ಗ್ರಾಮಗಳ ಪಕ್ಷದ ಮುಖಂಡರು, ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್.
