ಬಾಗಲಕೋಟೆ : ಡಾ. ಬಾಬಾಸಾಹೇಬ ಅಂಬೇಡ್ಕರರವರ 134 ನೇ ಜಯoತ್ಯೋತ್ಸವವನ್ನು ದಿ 28/4/2025 ಸೋಮವಾರ ದಂದು ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ಲ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದ ಬಯಲು ಜಾಗೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವದು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಮ. ನಿ. ಪ್ರ. ಗುರುಮಹಾoತ ಸ್ವಾಮಿಗಳು ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಇಲಕಲ್ಲ ಇವರು ವಹಿಸಲಿದ್ದು ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ವಿಜಯಾನಂದ ಕಾಶಪ್ಪನವರ ಕಾರ್ಯಕ್ರಮ ಉದ್ಘಾಟಿಸುವರು, ಅಧ್ಯಕ್ಷತೆಯನ್ನು ಶಿಕ್ಷಕರಾದ ಯಲ್ಲಪ್ಪ ಚಲವಾದಿ ವಹಿಸಲಿದ್ದು ಗ್ರಾಮದ ಪ್ರಗತಿಪರ ರೈತರಾದ ಚನ್ನಪ್ಪಗೌಡ್ರ ನಾಡಗೌಡ್ರ ಸೇರಿದಂತೆ ಊರಿನ ಪ್ರಮುಖರು ಸುತ್ತಮುತ್ತಲಿನ ಗ್ರಾಮದ,ನಗರದ, ಹಿರಿಯರು ಭಾಗವಹಿಸಲಿದ್ದು ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಸ್ಪಾರ್ಪಣೆ, ಅಂಬೇಡ್ಕರ್ ವೃತ್ತದ ಧ್ವಜಾರೋಹಣ,ಉಪನ್ಯಾಸ, ಸನ್ಮಾನ ಹಾಗೂ ಅನ್ನ ಸಂತರ್ಪಣೆ, ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಒಳಗೊಂಡಂತೆ ಇತರೆ ಕಾರ್ಯಕ್ರಮಗಳು ಜರುಗಲಿವೆ ಎಂದು ಡಾ. ಬಾಬಾಸಾಹೇಬ ಅಂಬೇಡ್ಕರರವರ ಸೇವಾ ಸಮಿತಿಯವರು ತಿಳಿಸಿದ್ದಾರೆ.
- ಕರುನಾಡ ಕಂದ
