
ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮ ಪಂಚಾಯತ್ ಕಾರ್ಯಲಯದಲ್ಲಿ ವಿಶ್ವಗುರು ಬಸವೇಶ್ವರ ರವರ 892ನೇ ಜಯಂತಿಯನ್ನು ಶ್ರೀಮತಿ ಗೀತಾ/ ಪ್ರೇಮ್ ಕುಮಾರ್ ಎಲ್ಮ್ ಡಗಿ ಅಧ್ಯಕ್ಷರು ಗ್ರಾ. ಪಂ. ಕೋಡ್ಲಿ ಮತ್ತು ದೇವೇಂದ್ರಪ್ಪ ಕೊಂಕಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೋಡ್ಲಿ ಇವರುಗಳ ಸಮ್ಮುಖದಲ್ಲಿ ಶ್ರೀ ವಿಶ್ವಗುರು ಬಸವೇಶ್ವರ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಣೆ ಮಾಡಿದರು.
ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಮಾಡಿರುವಂತಹ ಸಮಾಜೋದ್ಧಾರಕ ವಚನ ಚಳುವಳಿ, ಅದು ಯಾವತ್ತಿಗೂ ಕೂಡ ಪ್ರಸ್ತುತವಾಗಿರುವಂಥದು. ಹಿಂದುಳಿದವರನ್ನು ಅಪ್ಪಿಕೊಂಡರು, ಅಸ್ಪೃಶ್ಯರನ್ನು ತಮ್ಮ ಜೊತೆ ಇಟ್ಟುಕೊಂಡರು, ಮಹಿಳೆಯರಿಗೆ ಸಮಾನತೆಯನ್ನು ನೀಡಿದರು. ಈ ರೀತಿಯಾಗಿ ಹತ್ತು ಹಲವು ಕೆಲಸಗಳನ್ನು 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಮಾಡುವುದರ ಮುಖಾಂತರ ವೀರಶೈವ ಸಮಾಜಕ್ಕೆ ಜೀವ ಕಳೆಯಾಗಿದ್ದಾರೆ. ಯಾವತ್ತಿಗೂ ಕೂಡಾ ನಾವು ಅವರನ್ನು ಸ್ಮರಿಸುವ ಕೆಲಸವನ್ನು ಮಾಡಬೇಕೆಂದು ದೇವೇಂದ್ರಪ್ಪ ಕೊಂಕಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಕಾರ್ಯಗಳು ಕೋಡ್ಲಿ ಈ ಸಂದರ್ಭದಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶ್ರೀ ಷ. ಬ್ರ. ಬಸವಲಿಂಗ ಶಿವಾಚಾರ್ಯರು ಹಿರೇಮಠ ಕೋಡ್ಲಿ, ಶ್ರೀಮತಿ ಗೀತಾ ಪ್ರೇಮ ಕುಮಾರ್ ಎಲ್ಮ್ ಡಗಿ ಅಧ್ಯಕ್ಷರು ಗ್ರಾ. ಪಂ. ಕಾರ್ಯಲಯ ಕೋಡ್ಲಿ, ದೇವಿಂದ್ರಪ್ಪ ಕೊಂಕಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೋಡ್ಲಿ, ಶಂಕರ್ ಹಳ್ಳಿ, ಸಿದ್ದು ಬುಬಲಿ, ಅಜೀಜ ಮೊಮಿನ, ಶಶಿಕಾಂತ್ ಆಡಕಿ ವಕೀಲರು ಕೋಡ್ಲಿ, ಆನಂದ ಸೇರಿ ತಾಂಡ, ಮಲ್ಲಪ್ಪ ಚಿಂತಕೋಟಿ, ಕೃಷ್ಣ ಸೇರಿ, ಬಸವರಾಜ ಸೇರಿ, ಶ್ರೀಕಾಂತ್ ತಾಂಡೂರ್, ಅಣ್ಣಾರಾವ್ ಪೆದ್ದಿ ಪ್ರಾ. ಕೃ. ಸ. ಸಂಘ. ನಿಯಮಿತ . ಕೋಡ್ಲಿ, ಅಣ್ಣಾರಾವ ಅರಳ್ಳಿ, ಕಾಂತಪ್ಪ ಉಳ್ಳಾಗಡ್ಡಿ, ಗ್ರಾಮ ಪಂಚಾಯತ್ ಸರ್ವ ಸದಸ್ಯರು, ಸಿಬ್ಬಂದಿಗಳು ಮತ್ತು ವೀರಶೈವ ಸಮಾಜದ ಮುಖಂಡರು ಹಾಗೂ ಇತರರು ಭಾಗಿಯಾಗಿದ್ದರು.
ವರದಿ: ಚಂದ್ರಶೇಖರ್ ಆರ್ ಪಾಟೀಲ್
