
ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಭವ್ಯವಾಗಿ ಜಗ ಜ್ಯೋತಿ ಹಾಗೂ ಸಾಂಸ್ಕೃತಿಕ ನಾಯಕ ಬಸವಣ್ಣನ 892 ನೇ ಜಯಂತ್ಯೊತ್ಸವ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ಫೋಟೊ ಮೆರವಣಿಗೆ ಮತ್ತು ಹಂತಿ ಪದ ಭಜನೆ ಹಾಡುಗಳು ಹಾಗೂ ಎತ್ತಿನ ಮೆರವಣಿಗೆ ಸಹ ಭವ್ಯವಾದ ಮೆರವಣಿಗೆ ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಷ. ಬ್ರ. ರೇವಣಸಿದ್ದ ಶಿವಾಚಾರ್ಯರು ನಡುವಿನ ಮಠ ರಟಕಲ್ ಅಪ್ಪಾಜಿ ಅವರು ಮಾತನಾಡಿ ಬಸವಣ್ಣನವರು 12 ನೇ ಶತಮಾನದ ಮಹತ್ವದ ಸಮಾಜ ಸುಧಾರಕರು. ಅಂದು ಈ ಸಮಾಜವನ್ನ ಕಾಡುತ್ತಿದ್ದ ಅನಿಷ್ಟ ಜಾತಿ ವ್ಯವಸ್ಥೆ ಮತ್ತು ಶೋಷಣೆಯ ವಿರುದ್ಧ ಬಂಡಾಯವೆದ್ದು, ವೈದಿಕಶಾಹಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದರು. ಅನುಭವ ಮಂಟಪ ಸ್ಥಾಪಿಸಿ ಅಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಿದರು. ಪುರುಷ ಮತ್ತು ಮಹಿಳೆಯರ ನಡುವೆ ಯಾವುದೇ ರೀತಿಯ ತಾರತಮ್ಯ ಇರಬಾರದೆಂದು ಪ್ರತಿಪಾದಿಸಿದರು,
ಮನುಷ್ಯನ ಬದುಕನ್ನು ಉತ್ತಮಗೊಳಿಸಲು ಇವರು ರಚಿಸಿದ ಬಸವಣ್ಣನವರ ವಚನಗಳು ಇಂದಿಗೂ ನಮ್ಮೆಲ್ಲರಿಗೂ ಮಾರ್ಗದರ್ಶಕ. ಬಸವಣ್ಣ ನುಡಿದಂತೆ ನಡೆದರು, ಕಾಯಕವೇ ಕೈಲಾಸವೆಂದರು ಇಂದಿನ ಸಂದರ್ಭದಲ್ಲಿ ಬಸವಣ್ಣನವರಿಗೆ ಗೌರವ ಸಲ್ಲಿಸುವುದೆಂದರೆ ಅವರ ಆದರ್ಶಗಳನ್ನು, ತತ್ವಗಳನ್ನು ಸರಿಯಾಗಿ ಅಧ್ಯಯನ ಮಾಡಿ ಅರ್ಥಮಾಡಿಕೊಳ್ಳುವುದು ಮತ್ತು ನಾವುಗಳು ನಮ್ಮ ಬದುಕಿನಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವುದು. ಈ ಸಂದರ್ಭದಲ್ಲಿ ರೇವಣಸಿದ್ಧ ಶರಣರು ಗೌರಿಗುಡ್ಡ ರವರು ಮಾತನಾಡಿದರು.
ಶ್ರೀ ಷ. ಬ್ರ.ರೇವಣಸಿದ್ದ ಶಿವಾಚಾರ್ಯರು ನಡುವಿನ ಮಠ ರಟಕಲ್ ಮತ್ತು ರೇವಣಸಿದ್ದ ಶರಣರು ಗೌರಿಗುಡ್ಡ, ಶರಣಬಸಪ್ಪ ಮಮಶೆಟ್ಟಿಜಿಲ್ಲಾ ಅಧ್ಯಕ್ಷರು. ಶಿವರಾಜಪ್ಪ ಭೀಮಳ್ಳಿ. ಶಿವರಾಜ್ ಚೌಕ.ರಾಚಯ್ಯ ಸ್ವಾಮಿಕ್ಕಿಣಿ . ಚಂದ್ರಕಾಂತ್ ಸಿಗಿ.ವೀರಣ್ಣ ಗಂಗಾಣಿ ರೈತ ಮುಖಂಡ. ಜಗದೀಪ್ ಮಾಳಗಿ,ಗೌರಿಶಂಕರ್ ಕಿನ್ನಿ ರೇವಣಸಿದ್ಧ ಬಡ ಇನ್ನೂ ಅನೇಕ ಮುಖಂಡರು ಭಾಗಿಯಾಗಿದ್ದರು.
ವರದಿ: ಚಂದ್ರಶೇಖರ್ ಆರ್ ಪಾಟೀಲ್
