ಬೆಳಗಾವಿ: ಮೇ 1. ಇದು ನಮ್ಮ ಸುಖಕ್ಕಾಗಿ ತಮ್ಮ ಜೀವನವನ್ನು ಒತ್ತೆಯಿಟ್ಟು ದುಡಿಯುವ ಅಸಂಖ್ಯಾತ ದುಡಿಮೆಯ ಕೈಗಳಿಗೊಂದು ಗೌರವದ ದಿನ… ನಮ್ಮ ದೇಶದ ಶಕ್ತಿ ಮತ್ತು ಬೆನ್ನೆಲುಬಾಗಿರುವ ಕಾರ್ಮಿಕರಿಗೆ ಗೌರವಿಸಲು ವಿಶ್ವ ಕಾರ್ಮಿಕ ದಿನಾಚರಣೆ ಆಚರಿಸುವ ದಿನವೇ ಈ ಮೇ 1.
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಪಕ್ಕದ ಹಳೇ ಪೋಲಿಸ್ ಠಾಣೆಯ ಆವರಣದಲ್ಲಿ ಗುರುವಾರ ಸಿ.ಆಯ್.ಟಿ.ಯ ಕಾರ್ಮಿಕ ಸಂಘಟನೆ ವತಿಯಿಂದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವು ಅದ್ದೂರಿಯಾಗಿ ಜರುಗಿತು ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿ ಪಡೆದ ಖ್ಯಾತ ಪತ್ರಕರ್ತ ಎಂ ಕೆ ಯಾದವಾಡ, ವಿಜಯ ಕರ್ನಾಟಕ ಪತ್ರಿಕೆಯ ತಾಲೂಕ ವರದಿಗಾರ ಮಲ್ಲಿಕಾರ್ಜುನರೆಡ್ಡಿ ಗೊಂದಿ ಸೇರಿ ಭೂ ಗರ್ಭಶಾಸ್ತದಲ್ಲಿ ಮೈಸೂರ ವಿಶ್ವವಿದ್ಯಾಲಯದಲ್ಲಿ ಪ್ರಥಮ ರ‍್ಯಾಂಕ್‌ನೊಂದಿಗೆ ಚಿನ್ನದಪದಕ ಪಡೆದ ರಾಮಾಪೂರದ ರೂಪಾ ಚನ್ನಬಸಪ್ಪ ಚೌದರಿ ಹಾಗೂ ಪಿಯುಸಿ ಯಲ್ಲಿ ಶೇ.೯೭ ರಷ್ಟು ಅಂಕ ಪಡೆದ ಓಬಳಾಪುರ ಕಾವೇರಿ ಈರಪ್ಪ ಬಡಿಗೇರ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಿ.ಆಯ್.ಟಿ.ಯು ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
- ಕರುನಾಡ ಕಂದ
