ಬೀದರ್/ ಬಸವಕಲ್ಯಾಣ : ಇತಿಹಾಸ ಪ್ರಸಿದ್ಧ ಶ್ರೀಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಪೂಜ್ಯ ಶ್ರೀ ಷ. ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಬಸವ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಬಸವಂತಪ್ಪ ಮಾಲಿಪಾಟೀಲ, ಗುರುಲಿಂಗಯ್ಯ ಸ್ವಾಮಿ, ರೇವಣಸಿದ್ದ ಬಿರಾದಾರ, ಚಂದ್ರಶೇಖರ ಕುಂಬಾರ, ಮಹಾಂತೇಶ ಪಾಟೀಲ, ಮಲ್ಲಮ್ಮ ಗುರುಲಿಂಗಯ್ಯಾ ಸ್ವಾಮಿ, ಸಂಗಮೇಶ ಕಿಣಗಿ ಮುಂತಾದವರು ಪಾಲ್ಗೊಂಡಿದ್ದರು.
ವರದಿ: ಶ್ರೀನಿವಾಸ ಬಿರಾದಾರ
