ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕೊಟ್ಟ ಗ್ರಾಮದಲ್ಲಿ ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾಲಯದಲ್ಲಿ ಡಾll ಪದವಿ ಪಡೆದ ಕೊಟ್ಟ ಶಂಕರ್ ಮಾತನಾಡಿ ಬುದ್ಧ, ಬಸವಣ್ಣ, ಟಿಪ್ಪು ಸುಲ್ತಾನ್, ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ಜ್ಯೋತಿ ಬಾಫುಲೆ, ಸಾವಿತ್ರಿ ಬಾಯಿ ಫುಲೆ, ಪೆರಿಯಾರ್ ರಾಮಸ್ವಾಮಿ, ಶ್ರೀ ನಾರಾಯಣ ಗುರು ಕಾನ್ಸಿ ರಾಮ್ ಜೀ, ಪ್ರೊ. ಬಿ ಕೃಷ್ಣಪ್ಪ ಪ್ರಮುಖ ನಾಯಕರ ವಿಚಾರಗಳನ್ನು ಹಾಗೂ ಡಾll ಅಂಬೇಡ್ಕರ್ ರ ಜೀವನದ ಹೋರಾಟಗಳ ನೆನಪುಗಳನ್ನು ಹೇಳುತ್ತಾ ವಾಸ್ತವ ದಲಿತರ ಬದುಕಿನ ವಿಚಾರಗಳನ್ನ ಮೆಲುಕು ಹಾಕುವುದರ ಮೂಲಕ ಗ್ರಾಮದ ಯುವಕರಿಗೆ ಜನಗಳಿಗೆ ವಿಚಾರಗಳನ್ನು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಂಜುಳಾ, ಡಾll ಕೊಟ್ಟ ಶಂಕರ್, ನಾರು ನಿಗಮದ ಅಧ್ಯಕ್ಷರು ಬಿ ಕೆ ಮಂಜುನಾಥ್, ಬಹುಜನ ಸಮಾಜ ಚಳುವಳಿ ಹೊರಾಟಗಾರರು ಜೆ .ಎನ್ .ರಾಜಸಿಂಹ, ಡಿಎಸ್ಎಸ್ ಹೋರಾಟಗಾರ ರಂಗನಾಥ್,
ಪಿಡಿಒ ವೆಂಕಟೇಶ್, ಕೊಟ್ಟ ಪಿಡಿಒ ನಾಗರಾಜ್, ಕಂದಾಯ ನಿರೀಕ್ಷಕರು ಕಸಬಾ ಶ್ರೀ ಕಾಂತರಾಜು, ಕಳುವರಹಳ್ಳಿ, ಚೇತನ್ ಕುಮಾರ್, ಸಣ್ಣಪ್ಪ, ಕೊಟ್ಟ ಕೋಡಿಹಳ್ಳಿ ಸಂತೋಷ್,.ವಿಎಸ್ಎಸ್ ಎನ್ ರಘು, ನವೀನ್,.ಶ್ರೀನಿವಾಸ್ ಗೌಡ, ವಿಜಯ ಕರ್ನಾಟಕ ಪತ್ರಿಕೆ ದೇವರಾಜ್, ಕನ್ನಡಪ್ರಭ ಪತ್ರಿಕೆ ಶಿವಕುಮಾರ್,
ಕರುನಾಡ ಕಂದ ಪತ್ರಿಕೆ ಕೊಟ್ಟ ಕರಿಯಣ್ಣ, ರಂಗನಾಥ್ ಮಾಸ್ಟರ್ ಗ್ರಾಮದ ಯುವಕರು ಅಣ್ಣತಮ್ಮಂದಿರು ಗ್ರಾಮದ ಎಲ್ಲಾ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿಗಾರರು : ಕೊಟ್ಟ ಕರಿಯಣ್ಣ
