ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಉಜ್ಜಿನಿ ಸರ್ಕಲ್ ಬಳಿ ಇರುವ ಕೊಟ್ಟೂರು ತಾಲೂಕು ಕಟ್ಟಡ ಕಾರ್ಮಿಕರ ಸಂಘ ಕಛೇರಿಯಲ್ಲಿ ಕಾರ್ಮಿಕರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಭಾವ ಚಿತ್ರಕ್ಕೆ ಹಾಗೂ ಕಾರ್ಮಿಕರು ದಿನ ನಿತ್ಯ ಕೆಲಸಕ್ಕೆ ಬಳಸುವ ಸಾಮಗ್ರಿಗಳಿಗೆ ಪೂಜೆ ಸಲ್ಲಿಸಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಿದರು.
ಸುಂದರ ಸಮಾಜ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ ಎಂದು ತಾಲೂಕು ಅಧ್ಯಕ್ಷ ಟಿ ಹನುಮಂತಪ್ಪ ರವರು ಹೇಳಿದರು.
ಕಾರ್ಮಿಕರಿಗೆ ಗೌರವಯುತ ಬದುಕು ಕಟ್ಟಿ ಕೊಡಬೇಕು ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸರ್ಕಾರಗಳಿಗೆ ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಮರಿಯಪ್ಪ ಅಣಿಜಿ ಗೌರವ ಅಧ್ಯಕ್ಷರು, ಹೆಚ್ ರಾಮಣ್ಣ ಉಪಾದ್ಯಕ್ಷರು, ವಿ ಕೊಟ್ರೇಶಿ, ಗುರು ಕಾರ್ಯದರ್ಶಿ, ಬೋರನಹಳ್ಳಿ ಮರಿಯಪ್ಪ ಖಜಾಂಚಿ, ಸಿಧ್ದಪ್ಪ, ಬಿ ಹನುಮಂತಪ್ಪ , ಅಣಗಿ ರಾಮಣ್ಣ, ಎಂ ನಾಗರಾಜ, ಬಿ ಕೊಟ್ರೇಶಿ ( ಮಯೂರ) ದಿನೇಶ್, ಕೆ ರಾಜಭಕ್ಷಿ, ಮಹಾಬಲೇಶ್ವರ, ಡಿ ರಾಜ ಸರ್ವ ಸದಸ್ಯರು ಸೇರಿದಂತೆ ಎಲ್ಲಾ ಕಾರ್ಮಿಕರು ಉಪಸ್ಥಿತರಿದ್ದರು.
