ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ: ತಾಲೂಕಿನ ಕೋಗಳಿ ತಾಂಡದ ಜೆಸ್ಕಾಂ ವತಿಯಿಂದ ಕಛೇರಿಯಲ್ಲಿ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು ,
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕದ ಅಧ್ಯಕ್ಷ ಪ್ರಕಾಶ್ ಆರ್ ರವರು ಮಾತನಾಡಿ ಹಗಲು ರಾತ್ರಿ ಎನ್ನದೆ ತಮ್ಮ ಜೀವವನ್ನು ಲೆಕ್ಕಿಸದೇ ನಮಗೆ ಬೆಳಕನ್ನು ನೀಡುವ ಕರೆಂಟ್ ಲೈನ್ ಮ್ಯಾನ್ ಗಳಿಗೆ ನಾವು ಮೊದಲು ಗೌರವವನ್ನು ನೀಡಬೇಕು, ಹಗಲು ರಾತ್ರಿ ಎನ್ನದೇ ಕೆಲಸವನ್ನು ಮಾಡುವ ಹಿಂದೆ ಎಷ್ಟೋ ಲೈನ್ ಮ್ಯಾನ್ ಗಳು ತಮ್ಮ ಜೀವವನ್ನು ಕಳೆದುಕೊಂಡಿರುವ ಅಂತಹ ಹಲವಾರು ಘಟನೆ ನಡೆದುಹೋಗಿವೆ, ಹಾಗಾಗಿ ಇವಾಗ ನಮ್ಮ ಕಣ್ಣ ಮುಂದೆ ಕೆಲಸ ಮಾಡುತ್ತಿರುವ ಲೈನ್ ಮ್ಯಾನ್ ಗಳಾದ ಹನುಮಂತಪ್ಪ, ನಿಂಗಪ್ಪ ರವರಿಗೆ ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕ ಕೋಗಳಿ ತಾಂಡದ ವತಿಯಿಂದ ಸನ್ಮಾನಿಸಲಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಘಟಕದ ಪ್ರಧಾನ ಕಾರ್ಯದರ್ಶಿ ದೇವರ ಮನಿ ನಿಂಗಪ್ಪ, ಸಂಘಟನೆ ಕಾರ್ಯದರ್ಶಿ ಕುಮಾರ್ ನಾಯ್ಕ ಸದಸ್ಯರುಗಳಾದ ಉಮೇಶ್ ಕೆ ಬಿ ಶರ್ವಣ್ ಕುಮಾರ್ ದುರ್ಗಾ ನಾಯ್ಕ್, ಸತೀಶ್ ನಾಯ್ಕ್ ಇದ್ದರು.
