ಹೊಸದಿಲ್ಲಿ : ಮುಸ್ಲಿಂ ವೈಯಕ್ತಿಕ ತಿದ್ದುಪಡಿ ಕಾನೂನು ವಿರೋಧಿಸಿವ ತಿದ್ದುಪಡಿ ಕಾಯ್ದೆ 2025ರ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು (AIMPLB) ಮಂಡಳಿ ಕರೆ ನೀಡಿರುವಂತೆ ಏಪ್ರಿಲ್ 30ರಂದು ರಾತ್ರಿ 9:00 ಬತ್ತಿ ಗುಲ್ ಎಂಬ ಹೆಸರಿನಡಿ ದೇಶಾದ್ಯಂತ ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ 15 ನಿಮಿಷಗಳ ಕಾಲ ದೀಪಗಳನ್ನು ಆರಿಸಲಾಯಿತು.
ದೇಶದ ಬಹುತೇಕ ನಗರಗಳ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಬತ್ತಿ ಗುಲ್ ಗೆ ಬೆಂಬಲ ವ್ಯಕ್ತವಾಯಿತು.
ಅದರಂತೆ ಮುಂಬೈ, ಹೈದರಾಬಾದ್, ದೆಹಲಿ, ಬೆಂಗಳೂರು ಸೇರಿದಂತೆ ದೇಶ್ಯಾದ್ಯಂತ ಬಹುತೇಕ ಪ್ರದೇಶಗಳು 15 ನಿಮಿಷಗಳ ಕಾಲ ದೀಪ ಆರಿಸುವುದರ ಮುಖಾಂತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.
ವರದಿ : ಜಿಲಾನಸಾಬ್ ಬಡಿಗೇರ್
