ರಾಯಚೂರು ಜಿಲ್ಲೆಯ ಸಿಂಧನೂರಿನ 3ನೇ ಮೈಲ್‌ಕ್ಯಾಂಪ್ ಕರಿಬಸವ ನಗರದ ಶ್ರೀ ರಂಭಾಪುರಿ ಖಾಸಾ ಶಾಖಾಮಠದಲ್ಲಿ ವನಸಿರಿ ಫೌಂಡೇಷನ್, ಜಂಗಮ ಕ್ಷೇಮಾಭಿವೃದ್ಧಿ ಸಂಘ ಹಾಗೂ ಚತುರ್ವೇದ ಪುರೋಹಿತ ಬಳಗದ ವತಿಯಿಂದ ಶ್ರೀ ಷ.ಬ್ರ.ಸೋಮನಾಥ ಶಿವಾಚಾರ್ಯರರ ಆಶೀರ್ವಾದದೊಂದಿಗೆ 4ನೇ ವರ್ಷದ ಜೈವಿಕ ಸಂಸ್ಕಾರ ಶಿಬಿರದಲ್ಲಿ ಬಸವ ಜಯಂತಿ ಅಂಗವಾಗಿ ವನಸಿರಿ ಪೌಂಡೇಷನ್ ವತಿಯಿಂದ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಇದೇವೇಳೆ ಮಾತನಾಡಿದ ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ದಯವಿಲ್ಲದ ಧರ್ಮವದೇವುದಯ್ಯಾ, ದಯವಿರಬೇಕು ಬೇಕು ಸಕಲ ಪ್ರಾಣಿಗಳಲ್ಲಿ ದಯವೇ ಧರ್ಮದ ಮೂಲವಯ್ಯ ಎನ್ನುವ ಬಸವಣ್ಣವರ ಮಾತಿನಂತೆ ನಮ್ಮ ಮುಂದಿನ ಪೀಳಿಗೆಗೆ ಪಕ್ಷಿ ಸಂಕುಲ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ.ಪ್ರಾಣಿಪಾಕ್ಷಿಗಳಿಗೆ ನೀರುಣಿಸುವ ಮೂಲಕ ಬಸವಣ್ಣನವರ ಮಾರ್ಗದಲ್ಲೇ ವನಸಿರಿ ತಂಡ ಸಾಗುತ್ತಿದೆ. ಪ್ರತಿಯೊಬ್ಬರೂ ಪ್ರಾಣಿಪಾಕ್ಷಿಗಳ ಮೇಲೆ ದಯೇ ತೋರಬೇಕು. ಇತ್ತೀಚಿನ ದಿನಗಳಲ್ಲಿ ಪ್ರಾಣಿಪಾಕ್ಷಿಗಳು ಅಳಿವಿನ ಅಂಚಿನಲ್ಲಿವೆ.ಬೇಸಿಯಲ್ಲಿ ನೀರು ಸಿಗಲಾರದೆ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಮುಂದಿನ ಪೀಳಿಗೆಗೆ ಪಕ್ಷಿ ಸಂಕುಲ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ತಮ್ಮ ಸುತ್ತಮುತ್ತಲಿನ ಗಿಡಮರಗಳಿಗೆ, ಮನೆಯ ಮೇಲ್ಚಾವಣಿ ಮೇಲೆ ನೀರಿನ ಅರವಟ್ಟಿಗೆಗಳನ್ನು ಇಟ್ಟು ಪ್ರಾಣಿಪಾಕ್ಷಿಗಳಿಗೆ ನಿರುಣಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸಂಧರ್ಭದಲ್ಲಿ ಚನ್ನಪ್ಪ ಕೆ ಹೊಸಹಳ್ಳಿ, ಮುದುಕಪ್ಪ ಹೊಸಳ್ಳಿ ಕ್ಯಾಂಪ್, ಶಿಬಿರದ ವಿದ್ಯಾರ್ಥಿಗಳು ಇದ್ದರು.
- ಕರುನಾಡ ಕಂದ
