ವಿಜಯನಗರ ಜಿಲ್ಲೆ ಕೊಟ್ಟೂರು;
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ (ರಿ.), ದೊಡ್ಡಬಳ್ಳಾಪುರ, ಬೆಂಗಳೂರು ಬಾಗಲಕೋಟೆ ಜಿಲ್ಲೆ ಶಾಖೆ ಇವರ ಸಹಯೋಗದಲ್ಲಿ ಕಾಯಕ ದಿನಾಚರಣೆಯ ಅಂಗವಾಗಿ ಇಂದು ಸಂಸ್ಥೆಯ ಶ್ರೀ ಹೆಚ್. ಎನ್. ವೀರಭದ್ರಪ್ಪ ಇವರನ್ನು ಕಾಯಕಯೋಗಿ ಪ್ರಶಸ್ತಿ ಪ್ರದಾನ ಮಾಡಿ ಬಾಗಲಕೋಟೆ ಜಿಲ್ಲೆಯ ರಬಕವಿಯಲ್ಲಿ ಸನ್ಮಾನಿಸಲಾಯಿತು.
ಇಂದು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಿಗೆ ಪ್ರಶಸ್ತಿ ಲಭಿಸಿರುವುದಕ್ಕಾಗಿ ಸಮಸ್ತ ಇಂದುವಿನ ಆಡಳಿತ ಮಂಡಳಿ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಬಳಗ ಅಭಿನಂದನೆಗಳನ್ನು ಸಲ್ಲಿಸಿದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಕೊಟ್ಟೂರಿನ ಸಾಹಿತಿಗಳಾದ ಕುಂಬಾರ ವೀರಭದ್ರಪ್ಪನವರು ಹಾಗೂ ಶ್ರೀ ಡಾ. ಹುಲಿಕಲ್ ನಟರಾಜ್‌ರವರು ಭಾಗವಹಿಸಿದ್ದರು.
ವರದಿ ಶಶಾಂಕ್ ಪಿ
