ಶಿರಸಿ: ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಯೋಗಮಂದಿರ, ಶಿರಸಿಯಲ್ಲಿ
ದಿನಾಂಕ:- 01/05/2025, ಗುರುವಾರ, ವೈಶಾಖ ಶುದ್ಧ ಚತುರ್ಥಿ ಶ್ರೀ ಸ್ವರ್ಣವಲ್ಲಿ ಮಠದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಶಂಕರ ಜಯಂತಿಯ ಅಂಗವಾಗಿ ಕಾರ್ಯಕ್ರಮಗಳು ನಡೆದವು.
ಪರಮ ಪೂಜ್ಯ ಮಂಗಲನಾಥಾನಂದ ಸ್ವಾಮಿಗಳು ಶ್ರೀ ರಾಮಕೃಷ್ಣ ಮಠ, ತುಮಕೂರು ಸಾನ್ನಿಧ್ಯ ವಹಿಸಿದ್ದರು. ಸಾಧಕರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಿತು. ಶ್ರೀ ತಮ್ಮಣ್ಣ ಬೀಗಾರ ರವರನ್ನು ಸನ್ಮಾನಿಸಲಾಯಿತು. ಬೆಳಿಗ್ಗೆಯಿಂದ ಮಾತೆಯರು ಶ್ರೀ ಶಂಕರರ ಸ್ತೋತ್ರವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪಠಿಸಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ
