ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ಗ್ರಾಮದ ಆರಾಧ್ಯದೇವರಾದ ಶ್ರೀ ತುರಮುಂದಿ ಬಸವೇಶ್ವರರ ಎಂಟನೇ ವರ್ಷದ ಮಹಾರಥೋತ್ಸವವು ಇಂದು ಸಂಜೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಮಹಾರಥೋತ್ಸವದ ಅಂಗವಾಗಿ ಚಿಕ್ಕೇಬಕೊಪ್ಪ ಶಿವಶಾಂತವೀರ ಶರಣರ ತುಲಾಭಾರ ಹಾಗೂ ಆರ್ಶೀವಚನ ಮತ್ತು ಕಳಸ ಕುಂಭಗಳೊಂದಿಗೆ ಗಂಗೆಸ್ಥಳ ಕಾರ್ಯಕಾರ್ಯಕ್ರಮ ವೀರಗಾಸೆ ಕಲಾವಿದರೊಂದಿಗೆ ಜರುಗಿತು. ನಂತರ ತುರಮುಂದಿ ಬಸವೇಶ್ವರ ಮತ್ತು ನೀಲಮ್ಮ ತಾಯಿಯ ಕಲ್ಯಾಣೋತ್ಸವ ಸಮಾರಂಭ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ತುರಮುಂದಿ ಬಸವೇಶ್ವರರ ಶಿಲಾಮೂರ್ತಿಗೆ ವಿವಿಧ ಅಭಿಷೇಕಗಳು, ನೈವೇದ್ಯ ಸಮರ್ಪಣೆ ಮತ್ತು ಮಹಾಮಂಗಳಾರತಿಯ ನಂತರ ಮಡಿ ತೇರನ್ನು ಎಳೆಯಲಾಯಿತು ಸಂಜೆ ವಿವಿಧ ಜಾನಪದ ಕಲಾತಂಡಗಳು, ಮಂಗಖವಾದ್ಯಗಳೊಂದಿಗೆ ರಥದಲ್ಲಿ ತುರಮುಂದಿ ಬಸವೇಶ್ವರ ಮತ್ತು ನೀಲಮ್ಮನವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.ರಥವು ಗ್ರಾಮದ ರಾಜಬೀದಿಯಲ್ಲಿ ಸಾಗಿ ಎದರು ಬಸವಣ್ಣನ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಪುನಃ ದೇವಸ್ಥಾನಕ್ಕೆ ತಲುಪಿತು.
ಮಹಾರಥೋತ್ಸವದಲ್ಲಿ ಗ್ರಾಮದ ಮುಖಂಡರಾದ ಜಿ.ಲಿಂಗನಗೌಡ, ಅಳ್ಳಳ್ಳಿ ವೀರೇಶ್, ಜಿ.ಚಂದ್ರಶೇಖರಗೌಡ, ಜಿ.ಮಲ್ಲಿಗೌಡ,ಗುಡ್ಡದ ಪಂಪಣ್ಣ, ಜಿ.ವೀರನಗೌಡ, ಜಿ.ಗಣೇಶಗೌಡ, ತುರುಮುಂದಿ ಬಸವೇಶ್ವರ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಗ್ರಾಮದ ವಿವಿಧ ಸಮಾಜಗಳ ಮುಖಂಡರು ಭಾಗವಹಿಸಿದ್ದರು.
ರಾತ್ರಿ ಗ್ರಾಮದ ಕಲಾವಿದರಿಂದ ಶ್ರೀಕೃಷ್ಣ ಲೀಲೆ ಎನ್ನುವ ಬಯಲಾಟ ಪ್ರದರ್ಶನಗೊಂಡಿತು.
ವರದಿ : ಜಿಲಾನಸಾಬ್ ಬಡಿಗೇರ್
