
ಬಳ್ಳಾರಿ / ಕಂಪ್ಲಿ : ಸಂಗಾತ್ರಯ ಸಂಸ್ಕೃತ ಪಾಠಶಾಲೆಯಿಂದ ಶಾರದಾ ಶಾಲೆಯವರೆಗೆ ಶ್ರೀ ಬಸವೇಶ್ವರವರ ಮೂರ್ತಿಯ ಮೆರವಣಿಗೆ ಭಕ್ತಿ ಭಾವದಿಂದ ಜರಗಿತು. ನಂತರ ಶಾರದಾ ಶಾಲೆಯಲ್ಲಿ ವೇದಿಕೆ ಕಾರ್ಯಕ್ರಮ ನಡೆಸಲಾಯಿತು.
ಮಹಾತ್ಮ ಬಸವೇಶ್ವರರ 892 ನೇಯ ಜಯಂತಿಯನ್ನು ಆಚರಣೆ ಮಾಡಲಾಯಿತು.
ನಗರದಲ್ಲಿ ಮಹಾತ್ಮ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಮಹಾತ್ಮ ಬಸವೇಶ್ವರರ 892 ನೇಯ ಜಯಂತಿಯನ್ನು ಆಚರಣೆ ಮಾಡಲಾಯಿತು.
ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ. ಎನ್. ಗಣೇಶ ಭಾಗಿಯಾಗಿ ಮಾತಾನಾಡಿ ಬಸವಣ್ಣನವರ ಜಯಂತಿ ಕೇವಲ ಆಚರಣೆಗೆ ಸೀಮಿತವಾಗದೆ ಜೀವನದಲ್ಲಿ ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ನಂತರ ಶಿಕ್ಷಕ ಡಾ. ಬಿ. ಸುನಿಲ್ ಉಪನ್ಯಾಸ ನೀಡಿ ಮಾತನಾಡಿ12ನೇ ಶತಮಾನದಲ್ಲಿ ವಚನಗಳ ಮೂಲಕ ಸಮಾಜವನ್ನ ತಿದ್ದಿದ ಬಸವಣ್ಣ ಅನುಭವ ಮಂಟಪ ನಿರ್ಮಿಸಿ, ಸಮಾಜಕ್ಕೆ ಸಮಾನತೆ ಸಾರಿದ್ದಾರೆ. ಅವರ ತತ್ವ, ವಚನಗಳು ಸಮಾಜಕ್ಕೆ ಮಾದರಿ’ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.
ನಂತರ ಉಪನ್ಯಾಸ ನೀಡಿದ ಶಿಕ್ಷಕ ಡಾ. ಬಿ. ಅನಿಲ್ ಅವರಿಗೆ ‘ಶರಣ ಶಿಕ್ಷಕ ಪ್ರಶಸ್ತಿ’ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಪಿ ಮುಖಯಸ್ವಾಮಿ, ಮುಖಂಡರಾದ ಅರವಿ ಬಸವನಗೌಡ, ಎಸ್.ಎಂ.ನಾಗರಾಜಸ್ವಾಮಿ, ಜಿ.ಚಂದ್ರಶೇಖರಗೌಡ, ವಾಲಿ ಕೊಟ್ರಪ್ಪ, ಎಸ್.ಚಂದ್ರಶೇಖರಗೌಡ, ರೇಣುಕಾಗೌಡ, ಬಿ.ವಿ.ಗೌಡ, ಕಲ್ಗುಡಿ ವಿಶ್ವನಾಥ, ಕೆ.ವಿರೂಪಾಕ್ಷಪ್ಪ, ಸುರೇಶಗೌಡ, ಬಸವರಾಜ, ವೀರಭದ್ರಯ್ಯಸ್ವಾಮಿ, ಎಸ್.ಡಿ.ಬಸವರಾಜ, ಎಲೆಗಾರ ವೆಂಕಟರೆಡ್ಡಿ, ಟಿ.ಶರಣಪ್ಪ, ಸಚಿನ್, ಅರವಿ ಅಮರೇಶಗೌಡ, ಎ. ಸಿ. ದಾನಪ್ಪ, ಮುಕ್ಕಂದಿ ಗಂಗಮ್ಮ, ಜಡೆಯ್ಯಸ್ವಾಮಿ ಸೇರಿದಂತೆ ವೀರಶೈವ ಲಿಂಗಾಯತ ಸಮಾಜ ಬಾಂಧವರು ಹಾಗೂ ಎಲ್ಲಾ ಸಮಾಜ ಬಾಂಧವರು, ಅಕ್ಕಮಹಾದೇವಿ ಮಹಿಳಾ ಮಂಡಳಿಯವರು ಹಾಗೂ ಸಾರ್ವಜನಿಕರು ಭಾಗಿಯಾದರು.
ವರದಿ : ಜಿಲಾನಸಾಬ್ ಬಡಿಗೇರ್
