ಬಳ್ಳಾರಿ / ಕಂಪ್ಲಿ : 2ನೇ ಮೇ 2025 ಶುಕ್ರವಾರ ಸಂಜೆ 5:30 ರಿಂದ ಸಣಾಪುರ ರಸ್ತೆಯಲ್ಲಿರುವ ಸರಕಾರಿ ಆಸ್ಪತ್ರೆ ಎದುರುಗಡೆ ಇರುವ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪತಂಜಲಿ ಯೋಗ ಸಮಿತಿ ಕಂಪ್ಲಿ ಹಾಗು ವಿಜಯನಗರ ಜಿಲ್ಲೆಯ ಮುಖ್ಯ ಕೇಂದ್ರೀಯ ಪ್ರಭಾರಿ ಪೂಜ್ಯ ಸ್ವಾಮಿ ಡಾ. ಪರಮಾರ್ಥ ದೇವಜೀ, ಪತಂಜಲಿ ಯೋಗ ಪೀಠ ಹರಿದ್ವಾರ, ಇವರ ದಿವ್ಯ ಉಪಸ್ಥಿತಿಯಲ್ಲಿ ರಾಜ್ಯ ಪ್ರಭಾವಿ ಅಂತರಾಷ್ಟ್ರೀಯ ಯೋಗ ಗುರು ಶ್ರೀ ಭವರಲಾಲ್ ಆರ್ಯ ಇವರ ಮಾರ್ಗದರ್ಶನದಲ್ಲಿ ಸತ್ಸಂಗ ಮತ್ತು ಕಾರ್ಯಕರ್ತರ ಬೈಠಕ್ ಕಾರ್ಯಕ್ರಮ ನಡೆಯಲಿದ್ದು ಸಾರ್ವಜನಿಕರು ಇದರಲ್ಲಿ ಪಾಲ್ಗೊಳ್ಳಬೇಕೆಂದು ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನಿ ಟ್ರಸ್ಟ್, ಮಹಿಳಾ ಪತಂಜಲಿ ಯೋಗ ಸಮಿತಿ ಹಾಗೂ ಯುವ ಭಾರತ್ ಕಿಸಾನ್ ಸೇವಾ ಸಮಿತಿಯವರು ಇದರ ಸದುಪಯೋಗಪಡಿಸಿಕೊಳ್ಳಲು ವಿನಂತಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್
