ತಿಮ್ಮಾಪುರ : ಬಾಗಲಕೋಟ ಜಿಲ್ಲೆಯ ಹುನುಗುಂದ ತಾಲೂಕಿನ ಕೂಡಲ ಸಂಗಮ ಅನುಭವ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತ ಶಾಖೆ, ಜಿಲ್ಲಾ ಆಡಳಿತ ಬಾಗಲಕೋಟೆ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಬುಧವಾರ ನಡೆದ ‘ವಿಶ್ವ ಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಜಯಂತಿ ಅಂಗವಾಗಿ ಬಸವಾದಿ ಶರಣರ ವಚನ ವೈಭವ ‘ ಸಾಂಸ್ಕೃತಿಕ ಸಮಾರಂಭದಲ್ಲಿ ಗುಳೇದಗುಡ್ಡದ ಹಿರಿಯ ಹಿಂದುಸ್ತಾನಿ ಗಾಯಕರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮಾಜಿ ಸದಸ್ಯರು ಅಖಂಡೇಶ್ವರ ಎಂ. ಪತ್ತಾರ ಅವರು ಬಸವಣ್ಣನವರ ವಚನ, ಲೋಕದ ಡೊಂಕು ನಿವೇಕೆ ತಿದ್ದುವಿರಿ, ದಯವಿಲ್ಲದ ಧರ್ಮವು ದಾವುದಯ್ಯ ಎಂಬ ವಚನ ಗಾಯನವನ್ನು ಸುಮಧುರ ಕಂಠದಿಂದ ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರ ಗಮನ ಸೆಳೆದರು.
ಹಿರಿಯ ಗಾಯಕ ಅಖಂಡೇಶ್ವರ ಎಂ. ಪತ್ತಾರ ಅವರ ವಚನ ಸಂಗೀತಕ್ಕೆ ಸರದಾರ ಮುಂದಿನ ಮನಿ, (ಹಾರ್ಮೋನಿಯಂ) ಚಂದ್ರಶೇಖರ ಆಲೂರ (ಕ್ಯಾಶಿಯೋ), ಪಾಂಡುರಂಗ ಬಡಿಗೇರ (ತಬಲಾ) , ಸಂಗೀತ ಶಿಕ್ಷಕಿ ಶ್ರೀಮತಿ ಸುಮಿತ್ರಾ ಪತ್ತಾರ (ತಂಬೂರಿ), ಸಾಥ್ ನೀಡಿ ಸಹಕರಿಸಿದರು .
ವಚನ ಸಂಗೀತ ಕಾರ್ಯಕ್ರಮ ನೀಡಿದ ಈ ಎಲ್ಲ ಸಂಗೀತ ಕಲಾ ತಂಡದ ಕಲಾವಿದರಿಗೆ ಕನ್ನಡ , ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣ ಕುಮಾರ ಜೈನಾಪುರ, ಧಾರವಾಡ ಕ,ಸಂ ಶಾಖೆ ಸಿಬ್ಬಂದಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರಗಳನ್ನು ವಿತರಿಸಿ ಗೌರವಿಸಿದರು.
- ಕರುನಾಡ ಕಂದ
