33ನೇ ಸ್ಥಾನಕ್ಕೆ ತೃಪ್ತಿಗೊಂಡ ಯಾದಗಿರಿ ಜಿಲ್ಲೆ ಫಲಿತಾಂಶ
ಯಾದಗಿರಿ: ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ, KSEAB 2025ರ ಕರ್ನಾಟಕ SSLC ಫಲಿತಾಂಶ ಅನ್ನು ಬಿಡುಗಡೆ ಮಾಡಿದ್ದು, ಪ್ರತಿ ಬಾರಿಯಂತೆ ಈ ಬಾರಿ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಕಾಯ್ದುಕೊಳ್ಳದೆ ಎರಡು ಸ್ಥಾನ ಪಲ್ಲಟಗೊಂಡು ಚೇತರಿಕೆ ಕಂಡಿದೆ.
ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಲಾಯಿತು. ಪ್ರಸಕ್ತ 2025ನೇಯ ವರ್ಷ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಿದ್ದು, ಉತ್ತೀರ್ಣ ಶೇಕಡಾವಾರು 62.34% ಆಗಿದೆ, ಕಳೆದ ವರ್ಷದ ಉತ್ತೀರ್ಣ ದರವಾದ 53% ಕ್ಕಿಂತ ಈ ಬಾರಿ 9% ಹೆಚ್ಚಳವಾಗಿದೆ. ಹೆಚ್ಚುವರಿಯಾಗಿ, 22 ವಿದ್ಯಾರ್ಥಿಗಳು 625/625 ರ ಪರಿಪೂರ್ಣ ಅಂಕಗಳನ್ನು ಗಳಿಸಿದ್ದಾರೆ.
ಪ್ರತಿಬಾರಿ ಎಸ್. ಎಸ್. ಎಲ್. ಸಿ ಆಗಿರಲಿ ಪಿ. ಯು. ಸಿ ಆಗಲಿ ಫಲಿತಾಂಶ ಬಂದ್ರೆ ಮೇಲಿಂದ ಅಲ್ಲಾ ನಾವು ಫಲಿತಾಂಶ ಕೆಲಗಡೆಯಿಂದ ಯಾವ ಸ್ಥಾನದಲ್ಲಿ ಇದೀವಿ ಅನ್ನೋದೇ ವಾಸ್ತವ. ಈ ಬಾರಿ ಯಾದಗಿರಿ ಜಿಲ್ಲಾ ಉಪ ನಿರ್ದೇಶಕರಾದ ಚನ್ನಬಸಪ್ಪ ಮುಧೋಳ ಅವರ ಸತತ ಪ್ರಯತ್ನದಿಂದ ಹಾಗೂ ಜಿಲ್ಲೆಯ ಎಲ್ಲಾ ಮುಖ್ಯ ಗುರುಗಳ ಪರಿಶ್ರಮದಿಂದ ಯಾದಗಿರಿ ಜಿಲ್ಲೆ ಎಸ್ ಎಲ್ ಸಿ ಫಲಿತಾಂಶ 2 ಸ್ಥಾನ ಸುಧಾರಣೆ ಕಂಡಿದೆ ಎಂದು ಸಂತಸ ವ್ಯಕ್ತಪಡಿಸಿದ ತಾಲೂಕ ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿ ಆಗಿರುವ ರವೀಂದ್ರ ಚೌಹಾಣ್ ರವರು ಮಾನ್ಯ ಉಪ ನಿರ್ದೇಶಕರಿಗೆ ಸಿಹಿ ಹಂಚಿ ಇನ್ನೂ ಹೆಚ್ಚಿನ ಪರಿಶ್ರಮದ ಅಗತ್ಯವಿದೆ ಮುಂಬರುವ ವರ್ಷಗಳಲ್ಲಿ ಇನ್ನೂ ಉತ್ತಮ ಫಲಿತಾಂಶ ಕೊಡುವ ನಿರೀಕ್ಷೆ ನಮ್ಮದು ಎಂದು ತಿಳಿಸಿದರು.
ವರದಿ: ಜಗದೀಶ್ ಕುಮಾರ್ ಭೂಮಾ
