ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು, ಉಜ್ಜಿನಿ ಗ್ರಾಮದ ಈ ಕ್ಷೇತ್ರದ ಆರಾಧ್ಯ ದೈವರಾದ ಶ್ರೀ ಉಜ್ಜಿನಿ ಮರಳಸಿದ್ದೇಶ್ವರ ಸ್ವಾಮಿಯ ಮಹಾ ರಥೋತ್ಸವ ಮಠದ ಪೂಜ್ಯರಾದ ಶ್ರೀಮದ್ ಉಜ್ಜಯಿನಿ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಷ||ಬ್ರ||ಶ್ರೀ|| ವರಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳು ಪಟ್ಟಾಧ್ಯಕ್ಷರು ತಗ್ಗಿನ ಮಠ ಮಹಾಸಂಸ್ಥಾನ, ಎಂ.ಬಿ. ಪಾಟೀಲ್
ಕರ್ನಾಟಕದ ಸಕ್ಕರೆ ಹೊರತುಪಡಿಸಿ ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಸಚಿವರು, ಎಂ. ಪಿ. ರೇಣುಕಾಚಾರ್ಯ ಮಾಜಿ ಶಾಸಕರು ಹಾಗೂ ಮಠದ ಅಧ್ಯಕ್ಷರು ಸರ್ವರು, ಊರಿನ ಗಣ್ಯಮಾನ್ಯರು, ಕ್ಷೇತ್ರದ ಸುತ್ತಮುತ್ತಲಿನ ಊರುಗಳ ಸದ್ಭಕ್ತರು ಆರಕ್ಷಕ ಸಿಬ್ಬಂದಿ ಮತ್ತು ಸಮಸ್ತ ಜನಸ್ತೋಮ ಹಾಗೂ ಎಲ್ಲಾ ವಾದ್ಯಗಳ ಮುಖಾಂತರ ಶ್ರೀ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಮತ್ತೂ ಇವತ್ತಿನ ದಿನ ಸ್ವಾಮಿಯ ಶಿಖರಕ್ಕೆ ತೈಲ ಎರೆಯುವ ಕಾರ್ಯಕ್ರಮದ ಮೂಲಕ ಸ್ವಾಮಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ವರದಿಗಾರರು- ಎನ್.ಚಂದ್ರಗೌಡ
